ಪೆರ್ಲ:ಎಣ್ಮಕಜೆ ಗ್ರಾ.ಪಂ.ಮಟ್ಟದ ತ್ರಿದಿನ ಗಣಿತೋತ್ಸವ ಜ.31 ರಿಂದ ಫೆ.2ರ ವರೆಗೆ ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದ್ದು ಬುಧವಾರ ಸಂಘಟನಾ ಸಮಿತಿ ರಚನೆ ಸಭೆ ನಡೆಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯತೀಂದ್ರ ರೈ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಬ್ಲಾಕ್ ನಿರೂಪಣಾಧಿಕಾರಿ ಶಿವರಾಮ್ ಎ.ಕಾರ್ಯಕ್ರಮದ ರೂಪುರೇಷೆಯ ಮಾಹಿತಿ ನೀಡಿದರು. ಗ್ರಾ.ಪಂ.ಸದಸ್ಯೆ ಚಂದ್ರಾವತಿ ಎಂ., ಮಾತೃ ಮಂಡಳಿ ಅಧ್ಯಕ್ಷೆ ಹರಿಣಾಕ್ಷಿ, ಗ್ರಾ.ಪಂ.ಪಂಚಾಯಿತಿ ಪಿ.ಇ.ಸಿ.ಕಾರ್ಯದರ್ಶಿ ದಿನೇಶ್, ಪ್ರಾಂಶುಪಾಲ ಗಂಗಾಧರ ಕೆ., ಮುಖ್ಯ ಶಿಕ್ಷಕ ವಾಸುದೇವ ನಾಯಕ್ ಶುಭ ಹಾರೈಸಿದರು. ಶಿಕ್ಷಕಿ ನಾಗರತ್ನ ಸ್ವಾಗತಿಸಿ, ಅಜಿತ ಎನ್.ಕೆ. ವಂದಿಸಿದರು.ಗೋಪಾಲ ಪಿ.ಕೆ.ನಿರೂಪಿಸಿದರು.


