ಮಂಜೇಶ್ವರ: ಲೈಬ್ರರಿ ಕೌನ್ಸಿಲ್ ಯೋಜನೆಯ ವಾಚನ ಸ್ಪರ್ಧೆಯ ಕಾಸರಗೋಡು ಜಿಲ್ಲಾ ಮಟ್ಟದ ಸ್ಪರ್ಧೆಯು ಕುಂಬಳೆ ಹೈಸ್ಕೂಲ್‍ನಲ್ಲಿ ಇತ್ತೀಚೆಗೆ ನಡೆಯಿತು. ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಶ್ರೀನಿವಾಸನ್.ಯಂ.ವಿ ಅವರ ಅಧ್ಯಕ್ಷತೆಯಲ್ಲಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಯಸ್. ನಾರಾಯಣ ಭಟ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ನವ ಮಾಧ್ಯಮಕ್ಕೆ ಪೈಪೆÇೀಟಿ ನೀಡಲು ರಾಜ್ಯ ಲೈಬ್ರರಿ ಕೌನ್ಸಿಲ್‍ನ ಯೋಜನೆಯಾದ ವಾಚನ ಸ್ಪರ್ಧೆಯು ನಿಜಕ್ಕೂ ಕಾಸರಗೋಡು ಜಿಲ್ಲೆಯ ಕನ್ನಡ ವಿದ್ಯಾರ್ಥಿಗಳಿಗೆ ಹೊಸ ಜ್ಞಾನ, ಹೊಸ ವಿಷಯಗಳನ್ನು ತಿಳಿಯಲು, ನವ ಮಾಧ್ಯಮಗಳಾದ ಮೊಬೈಲ್, ವಾಟ್ಸ್ ಏಪ್ ಬಳಕೆಗಳಿಗಿ ಪೈಪೆÇೀಟಿ ನೀಡುವಂತಾಗಿದೆ. ಪುಸ್ತಕಗಳ ಓದುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಕುಸಿದಿದ್ದು, ಸ್ಪರ್ಧೆಯ ಕಾರಣದಿಂದ ಓದುವಿಕೆಯತ್ತ ತೊಡಗಿಸಿಕೊಳ್ಳಲು ಹೆಚ್ಚು ಸಾಧ್ಯತೆಯಾಗಿ ಮೂಡಿಬಂದಿದೆ. ಇದು ಸ್ಪರ್ಧೆಗೆ ಮಾತ್ರ ಸೀಮಿತವಾಗದೆ ವಿದ್ಯಾರ್ಥಿಗಳಲ್ಲಿ ಇತರ ವಿಚಾರಗಳನ್ನೂ ಓದಿನೋಡುವ ಹವ್ಯಾಸಕ್ಕೆ ತೆರೆದುಕೊಳ್ಳುವುದು. ಸ್ವತಃ ನಿರ್ಧಾರ ಕೈಗೊಳ್ಳಲು ಅನ್ಯಾಯದ ವಿರುದ್ಧ ಸಿಡಿದೇಳಲು ಸಹಾಯವಾಗಿದೆ ಎಂದು ತಿಳಿಸಿದರು.
ಲೈಬ್ರೆರಿ ಕೌನ್ಸಿಲ್ ಸದಸ್ಯರಾದ ಶ್ರೀಕುಮಾರಿ ಟೀಚರ್, ಜಯಂತ ಮಾಸ್ತರ್, ವನಿತಾ.ಆರ್.ಶೆಟ್ಟಿ, ಮಹಾಜನ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕಿ ಗಾಯತ್ರಿ.ಎ ಮೊದಲಾದವರು ಶುಭಾಶಂಸನೆಗೈದರು. ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಅಹ್ಮದ್ ಹುಸೈನ್ ಪಿ.ಕೆ. ಸ್ವಾಗತಿಸಿ, ವಂದಿಸಿದರು. ಮಂಜೇಶ್ವರ ಕಾಸರಗೋಡು ಮತ್ತು ಹೊಸದುರ್ಗ ಶಾಲೆಗಳಿಂದ ತಾಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು.


