ಕುಂಬಳೆ: ಕನ್ನಡ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಹಾಗೂ ಅಪೂರ್ವ ಕಲಾವಿದರು ಕಾಸರಗೋಡು ಇವುಗಳ ಜಂಟಿ ಆಶ್ರಯದಲ್ಲಿ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ಎಡನಾಡು ಸಹಯೋಗದೊಂದಿಗೆ ಜ.31 ರಂದು ಶುಕ್ರವಾರ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಅಪರಾಹ್ನ 1.30 ರಿಂದ ಕನ್ನಡ ಚಿಂತನೆ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಶ್ರೀಭಾರತೀ ವಿದ್ಯಾಪೀಠದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಪೂರ್ವ ಕಲಾವಿದರು ಕಾಸರಗೋಡಿನ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಅಧ್ಯಕ್ಷತೆ ವಹಿಸುವರು. ನೀರ್ಚಾಲು ಮಹಾಜನ ಹೈಸ್ಕೂಲಿನ ಶಿಕ್ಷಕಿ ವಾಣಿ ಪಿ.ಎಸ್. ಅವರು ಕನ್ನಡ ಭಾಷೆ ಮತ್ತು ಸಂಸ್ಕøತಿಯ ಬಗ್ಗೆ ವಿಶೇಷೋಪನ್ಯಾಸ ನೀಡುವರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶ್ರೀಭಾರತಿ ವಿದ್ಯಾಪೀಠದ ಕಾರ್ಯದರ್ಶಿ ಶಾಮರಾಜ ದೊಡ್ಡಮಾಣಿ, ಆಡಳಿತಾಧಿಕಾರಿ ಶಾಮ ಭಟ್ ದರ್ಬೆಮಾರ್ಗ ಉಪಸ್ಥಿತರಿದ್ದು ಶುಭಹಾರೈಸುವರು. ಅಪೂರ್ವ ಕಲಾವಿದರು ಕಾಸರಗೋಡಿನ ಕಾರ್ಯದರ್ಶಿ ಡಾ.ರತ್ನಾಕರ ಮಲ್ಲಮೂಲೆ ನೇತೃತ್ವ ವಹಿಸುವರು. ಸ್ವಸ್ತಿಶ್ರೀ ಕಲಾಪ್ರತಿಷ್ಠಾನದ ಅಧ್ಯಕ್ಷ ಶಿವಶಂಕರ ಭಟ್ ದಿವಾಣ ಪ್ರಾಸ್ತಾವಿಕವಾಗಿ ಮಾತನಾಡುವರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸ್ವಸ್ತಿಶ್ರೀ ಕಲಾಪ್ರತಿಷ್ಠಾನದವರಿಂದ ಯಕ್ಷಗಾನ, ವಿದ್ಯಾರ್ಥಿಗಳಿಂದ ಭಾವ ಗಾಯನ ನಡೆಯಲಿದೆ.


