ಕಾಸರಗೋಡು: ಚಿನ್ಮಯ ವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಒಂದು ವರ್ಷ ಕಾಲ ಹಮ್ಮಿಕೊಳ್ಳಲಾದ ವೈವಿಧ್ಯಮಯ ಕಾರ್ಯಕ್ರಮದ ಪೂರ್ವಭಾವಿಯಾಗಿ `ಮೆಗಾ ತಿರುವಾದಿರ'ವನ್ನು ಪ್ರದರ್ಶಿಸಲಾಯಿತು.
4 ರಿಂದ 11 ನೇ ತರಗತಿಯವರೆಗಿನ ವಿದ್ಯಾರ್ಥಿನಿಯರು ಪ್ರದರ್ಶಿಸಿದ ತಿರುವಾದಿರಕ್ಕೆ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳು, ಚಿನ್ಮಯ ಮಿಷನ್‍ನ ಸದಸ್ಯರು, ಶಾಲಾ ಆಡಳಿತ ಮಂಡಳಿ, ಪೆÇೀಷಕರು ಸಾಕ್ಷಿಯಾದರು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟನೆಗೈದ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ತಮ್ಮ ಆಶೀರ್ವಚನದಲ್ಲಿ ಮಾತನಾಡುತ್ತಾ, ಜನವರಿ 27 ರಂದು ಚಿನ್ಮಯ ವಿದ್ಯಾಲಯ ಕಾಸರಗೋಡಿನ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಲಾದ ಸಮಾರಂಭವನ್ನು ಚಿನ್ಮಯ ಮಿಷನಿನ ಅಂತಾರಾಷ್ಟ್ರೀಯ ಮುಖ್ಯಸ್ಥ ಸ್ವಾಮಿ ಸ್ವರೂಪಾನಂದಜಿಯವರು ಉದ್ಘಾಟಿಸಲಿರುವರು. ಅದಕ್ಕೆ ಪೂರ್ವಭಾವಿಯಾಗಿ ಮಕರ ಸಂಕ್ರಮಣದ ಪುಣ್ಯ ದಿನ ಮೆಗಾ ತಿರುವಾದಿರವನ್ನು ಪ್ರದರ್ಶಿಸುವುದು ಅರ್ಥಪೂರ್ಣವಾಗಿದೆ. ಭಗವಾನ್ ಮಹಾದೇವ ಪಾರ್ವತಿಯರ ವಿವಾಹ ಮುಹೂರ್ತದ ಮಂಗಳ ಸಂದರ್ಭದಲ್ಲಿ ಮಹಿಳೆಯರು ಸಂತೋಷದಿಂದ ನರ್ತಿಸುವ ಸಂಕೇತವಾಗಿದೆ ತಿರುವಾದಿರ. ನಮ್ಮ ಬದುಕೇ ಒಂದು ಆಚರಣೆಯಾಗಿರಬೇಕು. ಹಬ್ಬದ ಸಡಗರದಿಂದ ಕೂಡಿರಬೇಕು. ಇಂದಿನ ತಿರುವಾದಿರ ಪ್ರತಿಯೊಬ್ಬರಲ್ಲೂ ಈ ಅರಿವನ್ನು ಮೂಡಿಸಲಿ ಎಂದರು.


