ಉಪ್ಪಳ: ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಇತ್ತೀಚೆಗೆ ಮಾತೃಪೂಜನ, ಮಾತೃಭೋಜನ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿನಿ ಕು. ಗಾಯತ್ರಿಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪದ್ಮಾವತಿ ಅಮ್ಮ ದೀಪಪ್ರಜ್ವಾಲನೆಗೈದು ಚಾಲನೆ ನೀಡಿದರು. ಮಕ್ಕಳು ತಮ್ಮ ತಾಯಂದಿರ ಪಾದಗಳನ್ನು ತೊಳೆದು, ಅರಸಿನ-ಕುಂಕುಮ-ಪುಷ್ಪಗಳಿಂದ ಅಲಂಕರಿಸಿ, ಆರತಿಯೆತ್ತಿ ಅವರ ಆಶೀರ್ವಾದ ಪಡೆದರು. ಮಧ್ಯಾಹ್ನದ ಭೋಜನದ ಸಮಯದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಕೈತುತ್ತನ್ನು ಉಣಿಸುವುದರೊಂದಿಗೆ ಮಾತೃಭೋಜನದಲ್ಲಿ ತಾಯಿ-ಮಕ್ಕಳು ಸಂತಸಪಟ್ಟರು.
ಶಾಲಾ ಮಾತೃಸಮಿತಿಯ ಅಧ್ಯಕ್ಷೆ ಶೋಭಾ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ, ಶಾಲಾ ಆಡಳಿತಸಮಿತಿಯ ಅಧ್ಯಕ್ಷ ರಾಮಚಂದ್ರ ಚೆರುಗೋಳಿ, ಕಾರ್ಯದರ್ಶಿ ಅಶೋಕ್ ಬಾಡೂರು, ಮಾತೃಸಮಿತಿಯ ಅಧ್ಯಕ್ಷೆ ಶೋಭಾ, ಶಿಶುವಾಟಿಕಾಮಾತೃಸಮಿತಿಯ ಅಧ್ಯಕ್ಷೆ ಲೀಲಾವತಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ವಾರಿಜಾ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಶಿಕ್ಷಕಿಯರಾದ ಸ್ವಾತಿ ಸ್ವಾಗತಿಸಿ, ಕು. ಸುಮಾ ವಂದಿಸಿದರು. ಮಲ್ಲಿಕಾ ನಿರೂಪಿಸಿದರು.


