ಮುಳ್ಳೇರಿಯ: ಮವ್ವಾರು ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯ ಹಾಗೂ ಇ.ಡಿ.ಗ್ಲೋಬ್ ಕಾಞಂಗಾಡು ಇದರ ಸಂಯುಕ್ತ ಆಶ್ರಯದಲ್ಲಿ ಪ್ಲಸ್ ಟು ವಿದ್ಯಾರ್ಥಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಒಂದು ಮಾಹಿತಿ ಶಿಬಿರವು ಇತ್ತೀಚೆಗೆ ಜರಗಿತು.
ಮವ್ವಾರು ಗ್ರಂಥಾಲಯದ ಸಭಾಂಗಣದಲ್ಲಿ ಜರಗಿದ ಕಾರ್ಯಾಗಾರದಲ್ಲಿ ಇ.ಡಿ.ಗ್ಲೋಬ್‍ನ ತರಬೇತುದಾರ ಜಯರಾಜ್ ಕಾಮಲೊನ್ ತರಗತಿಯನ್ನು ನಡೆಸಿಕೊಟ್ಟರು. ಪ್ಲಸ್ ಟು ಮತ್ತು ಪದವಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವಿದ್ಯಾಭ್ಯಾಸ, ಹೊಸ ತರಗತಿಗಳು, ಉದ್ಯೋಗ ಲಭ್ಯತೆಯ ಬಗ್ಗೆ ಮಾರ್ಗದರ್ಶನ ನೀಡಿರುವುದಲ್ಲದೆ, ವಿದ್ಯಾರ್ಥಿಗಳ ಹಾಗೂ ಪೋಷಕರ ಸಂದೇಹಗಳಿಗೆ ಪರಿಹಾರವನ್ನು ಸೂಚಿಸಿದರು. ಗ್ರಂಥಾಲಯದ ಅಧ್ಯಕ್ಷ ಕೃಷ್ಣಮೂರ್ತಿ ಎಡಪ್ಪಾಡಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಗಂಗಾಧರ ರೈ ಎಂ ಸ್ವಾಗತಿಸಿ, ಕಾರ್ಯದರ್ಶಿ ಸೀತಾರಾಮ ಭಟ್ ಎಂ. ವಂದಿಸಿದರು.


