ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಮುಳಿಯಾರು ಗ್ರಾಮಪಂಚಾಯಿತಿಯ ಬೋವಿಕ್ಕಾನದಲ್ಲಿ ಪುನರ್ವಸತಿ ಗ್ರಾಮನಿರ್ಮಾಣಗೊಳ್ಳಲಿದ್ದು, ಫೆ.8ರಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಕಾಮಗಾರಿಗೆಶಿಲಾನ್ಯಾಸ ನಡೆಸುವರು.
ಕೇರಳ ತೋಟಗಾರಿಕೆ ನಿಗಮ ನೀಡಿರುವ 25 ಎಕ್ರೆಜಾಗದಲ್ಲಿ ಈ ಪುನರ್ವಸತಿ ಗ್ರಾಮ ನಿರ್ಮಾಣವಾಗಲಿದೆ. ಸಂತ್ರಸ್ತರಾದ ಮಕ್ಕಳಿಗೆ ಮತ್ತು ಅವರ ಹೆತ್ತವರಿಗಾಗಿ ಈ ಬೃಹತ್ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಅಳವಡಿಸಿ 58.75 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಳ್ಳುವ ಯೋಜನೆಯಲ್ಲಿ ಮನೆಗಳು,ವಿದ್ಯುತ್ ಸಂಪರ್ಕ, ನೌಕರಿ, ದೈಹಿಕ ಪುನಶ್ಚೇತನ, ಮಾನಸಿಕ ಅಭಿವೃದ್ಧಿಗೆ ತರಬೇತಿ, ಶಾರ್ಟ್ ಸ್ಟೇ ಸಹಿತ ವ್ಯವಸ್ಥೆಗಳು ಇಲ್ಲಿರಲಿದೆ. ಮೊದಲ ಹಂತದಲ್ಲಿ ಕ್ಲಿನಿಕಲ್ ಯೂನಿಟ್, ಡಾರ್ಮೆಟರಿ, ಫೆÇೀಸ್ಟರ್ ಕೇರ್ ಯೂನಿಟ್, ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿವೆ. ದ್ವಿತೀಯ ಹಂತದಲ್ಲಿ ಆಫಿಂ ಥಿಯೇಟರ್, ಗ್ರಂಥಾಲಯ, ಮುಕ್ತ ಸಭಾಂಗಣ, ಆಡಳಿತ ವಿಭಾಗ, ಸಭಾಂಗಣ ಇತ್ಯಾದಿಗಳ ನಿರ್ಮಾಣವಾಗಲಿದೆ.

