ಕಾಸರಗೋಡು: ದುರಸ್ತಿಕೆಲಸಗಳಿಗಾಗಿ ಮುಚ್ಚುಗಡೆಗೊಂಡಿರುವ ಕಾಸರಗೋಡು ಚಂದ್ರಗಿರಿ ಸೇತುವೆ ಕೆಲಸ ಪೂರ್ತಿಯಾಗಲು ಇನ್ನೂ ಒಂದುವಾರ ಕಾಯಬೇಕಾಗಿಬರಲಿದೆ. ಗುತ್ತಿಗೆದಾರರ ಪ್ರಕಾರ ಜನವರಿ 25ರಂದು ದುರಸ್ತಿಕೆಲಸ ಪೂರ್ತಿಗೊಳ್ಳಲಿದ್ದು, ಪೂರ್ಣಪ್ರಮಾಣದಲ್ಲಿ ವಾಹನ ಸಂಚಾರಕ್ಕೆ ತೆರೆದು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸೇತುವೆ ಅಂಚಿಗಿರುವ ಕಾಂಕ್ರೀಟ್ ಸ್ಲ್ಯಾಬ್‍ಗಳ ನವೀಕರಣಕಾರ್ಯ ಪೂರ್ತಿಗೊಂಡರೂ, ಇದಕ್ಕೆ ನೀರುಣಿಸಿ ಕ್ಯೂರಿಂಗ್ ನಡೆಯಲು ಒಂದಷ್ಟು ಕಲಾವಕಾಶ ತಗುಲುತ್ತದೆ. 40ರಿಂದ 45 ಟನ್ ಭಾರದ ಘನವಾಹನಗಳು ನಿರಂತರ ಸಂಚಾರ ನಡೆಸುವುದರಿಂದ ನಿಗದಿತ ಸಮಯದ ವರೆಗೆ ಕ್ಯೂರಿಂಗ್ ನಡೆಸುವುದು ಅನಿವಾರ್ಯ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಅಲ್ಲದೆ ಸೇತುವೆ ಆರು ಲ್ಯಾಬ್‍ಗಳನ್ನು ಹೊಂದಿದ್ದು, ಇವುಗಳು ಸಂದಿಸುವ ಜಾಗದಲ್ಲಿ ಕಾಂಕ್ರೀಟ್ ಕಿತ್ತುಕೊಂಡಿದ್ದು, ಇವುಗಳ ದುರಸ್ತಿಯೂ ನಡೆಯಬೇಕಾಗಿದೆ.
ಜನವರಿ 4ರಿಂದ ಈ ಹಾದಿಯಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಕಾಸರಗೋಡು-ವಿದ್ಯಾನಗರ-ನಾಯಮರ್‍ಮೂಲೆ ಹಾದಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಅನುಭವಿಸಬೇಕಾಗುತ್ತಿದೆ.
ಕಾಸರಗೋಡು ನಗರದಿಂದ ಚಂದ್ರಗಿರಿ ಸೇತುವೆ ಸನಿಹಕ್ಕೆ ಆಟೋರಿಕ್ಷಾಗಳು ಸರ್ವೀಸ್ ನಡೆಸುತ್ತಿದ್ದರೆ, ಪ್ರಯಾಣಿಕರು ಸೇತುವೆಯಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ಸೇತುಎ ಆಚೆಭಾಗಕ್ಕೆ ಕಾಞಂಗಾಡು ಭಾಗಕ್ಕೆ ತೆರಳುವ ಬಸ್‍ಗಳು ಆಗಮಿಸುತ್ತಿದೆ.

