ಕಾಸರಗೋಡು: ರಾಜ್ಯದ ಪ್ರಥಮ ರಾಷ್ಟ್ರೀಯ ಉದ್ಯೋಗ ಖಾತ್ರಿ ಸಾಲ ಮೇಳ ಜಿಲ್ಲೆಯ ಪಿಲಿಕೋಡ್ ಗ್ರಾಮಪಂಚಾಯಿತಿಯಲ್ಲಿ ನಡೆಯಿತು. ನೀಲೇಶ್ವರ ಬ್ಲೋಕ್ ಪಂಚಾಯಿತಿ ಮತ್ತು ಪಿಲಿಕೋಡ್ ಗ್ರಾಮಪಂಚಾಯಿತಿಗಳು ವ್ಯಕ್ತಿಗತ ಆಸ್ತಿನಿರ್ಮಾಣದ ಫಲಾನುಭವಿಗಳಿಗೆ ಸಾಲ ಮೇಳ ಆಯೋಜಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. 5 ಜೆ.ಎಲ್.ಜಿ.(ಜಾಯಿಂಟ್ ಲಯಬಿಲಿಟಿ ಗ್ರೂಪ್)ಗಳ ಮೂಲಕ 31 ಫಲಾನುಭವಿಗಳಿಗೆ ಮೊದಲಹಂತದಲಿಸಾಲಮಂಜೂರು ಮಾಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಂಗವಾಗಿ ನಿರ್ಮಿಸಲಾಗುವ ಮೇಕೆಯ ಗೂಡು, ಕೋಳಿ ಗೂಡು, ಹಸುವಿನ ಹಟ್ಟಿ ಇತ್ಯಾದಿಗಳಿಗೆ ಸಾಮಾಗ್ರಿ ಖರಿಸಲು ಮೊತ್ತ ಸಾಲದ ಮೂಲಕ ಲಭಿಸುತ್ತಿದೆ. ಸಾಧಾರಣ ಗತಿಯಲ್ಲಿ ಈ ಮೊಬಲಗನ್ನು ಫಲಾನುಭವಿಯೇ ಹೂಡಬೇಕು. ಆದರೆ ಹಣಕಾಸಿನ ಮುಗ್ಗಟ್ಟಿನ ಪರಿಣಾಮ ನಿರ್ಮಾಣ ನಡೆಯದೇ ಇರುವ ಮಂದಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಯೋನೆ ಜಾರಿಗೊಳಿಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ Éಮೂಲಕ ಸಾಲಮೇಳ ಕೊಡಕ್ಕಾಡ್ ಸೇವಾ ಸಹಕಾರಿ ಬ್ಯಾಂಕ್ ನೊಂದಿಗೆ ಸೇರಿನಡೆಸಲಾಗುತ್ತಿದೆ.
ಏನಿದು ಯೋಜನೆ ?
ಈ ಯೋಜನೆಯಲ್ಲಿ ಪ್ರಥಮಹಂತದಲ್ಲಿ ಕೃಷಿಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. .ವ್ಯಕ್ತಿಗತ ಆಸ್ತಿ ನಿರ್ಮಾಣ ಫಲಾನುಭವಿಗಳ ಅರ್ಜಿಗಳನ್ನು ವಾರ್ಡ್‍ಮಟ್ಟದಲ್ಲಿ ಸ್ವೀಕರಿಸಲಾಗುವುದು. ಈಸಂಬಂಧ ಸಭೆಗಳನ್ನೂ ನಡೆಸಲಾಗುವುದು. ಇವರ ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಿಸಿದ ಎಸ್ಟಿಮೇಟ್ ಮೊಬಲಗು ಗಣನೆಮಾಡಿದ ನಂತರ ಸ್ವಂತ ವೆಚ್ಚ ಭರಿಸಬಲ್ಲ ಮತ್ತು ಭರಿಸಲಾರದೇ ಇರುವವರನ್ನು ವಿಂಗಡಿಸಲಾಗುವುದು. ನಂತರ ಸಹಕಾರಿ ಬ್ಯಾಂಕ್‍ಗಳ ಜೆ.ಎಲ್.ಜಿ. ಸಾಲ ಲಭಿಸುವ ನಿಟ್ಟಿನಲ್ಲಿ ಒಂದೇ ಪ್ರದೇಶದ/ ವಾರ್ಡಿನ ಫಲಾನುಭವಿಗ¼ನ್ನುಒಟ್ಟು ಸೇರಿಸಿ ಒಂದುಜಿ.ಎಲ್.ಜಿ.ರಚಿಸಲಾಗುವುದು. ಈ ಜಿ.ಎಲ್.ಜಿ.ಗಳಿಗೆ ಒಂದು ಹೆಸರು, ಒಬ್ಬರು ಅಧ್ಯಕ್ಷ, ಕಾರ್ಯದರ್ಶಿ ಇರುವರು. ನಂತರ ಅವರ ನಿರ್ಮಾಣ ಚಟುವಟಿಕೆಗಳಿಗಿರುವ ಮೊತ್ತ ಜೆ.ಎಲ್.ಜಿಸಾಲ ರೂಪದಲ್ಲಿ ಲಭಿಸಲಿದೆ. ಸರಕಾರದಿಂದ ಈ ಮೊಬಲಗು ಮಂಜೂರಾದ ತಕ್ಷಣಸಾಲ ಮರುಪಾತಿಸಬೇಕು. ವರ್ಷಕ್ಕೆ ಶೇ 10 ಬಡ್ಡಿ ರೂಪದಲ್ಲಿ ಒಂದು ವರ್ಷದ ಅವಧಿಗೆ ಸಾಲ ನೀಡಲಾಗುವುದು.
ಸಾಲಮೇಳ ಉದ್ಘಾಟನೆ:
ಪಿಲಿಕೋಡ್ ಗ್ರಾಮಪಂಚಾಯತ್ ನಲ್ಲಿ ನಡೆದ ನೌಕರಿ ಖಾತರಿ ಯೋಜನೆಯ ಸಾಲಮೇಳವನ್ನು ನೀಲೇಶ್ವರಬ್ಲೋಕ್ ಪಂಚಾಯತ್ ಅಧ್ಯಕ್ಷೆ ಪಿ.ಪಿ.ಜಾನಕಿ ಉದ್ಘಾಟಿಸಿದರು. ಪಿಲಿಕೋಡ್ ಗ್ರಾಮಪಂಚಾಯತ್ ಉಪಾಯಕ್ಷೆಪಿ.ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಖಾತ್ರಿ ಯೋಜನೆಯ ಜಿಲ್ಲಾ ಸಂಚಾಲಕ ಕೆ.ಪ್ರದೀಪನ್ ಸಾಲದ ಚೆಕ್‍ವಿತರಿಸಿದರು. ನೀಲೇಶ್ವರ ಬ್ಲೋಕ್ ಅಭಿವೃದ್ಧಿ ಅಧಿಕಾರಿ ಆರ್.ಸಜೀವನ್, ಕೊಡಕ್ಕಾಡ್ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಿ.ವಿ.ನಾರಾಯಣನ್,ನೀಲೇಶ್ವರ ಬ್ಲೋಕ್ ವಿಸ್ತರಣಾಧಿಕಾರಿ ಕೆ.ಜಿ.ಬಿಜುಕುಮಾರ್, ಅಭಿವೃದ್ಧಿ ಸ್ಥಾಯೀ ¸ಮಿತಿ ಅಧ್ಯಕ್ಷ ಎಂ.ಕುಂuಟಿಜeಜಿiಟಿeಜರಾಮನ್, ಕೊಡಕ್ಕಾಡ್‍ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಕೆ.ಪ್ರಭಾಕರನ್ ಮೊದಲಾದವರು ಉಪಸ್ಥಿತರಿದ್ದರು. ಪಿಲಿಕೋಡ್ ಗ್ರಾವಪಂಚಾಯತ್‍ಕಾರ್ಯದರ್ಶಕೆ.ರಮೇಶ್ ಸ್ವಗತಿಸಿದರು. ಸಹಾಯಕ ಕಾರ್ಯದರ್ಶಿ ಕೆ.ವಿನಯನ್ ವಂದಿಸಿದರು.


