HEALTH TIPS

ಜ. 20ರಂದು ಸಭೆ ಜಿಲ್ಲಾ ಯೋಜನಾ ಸಮಿತಿ ಸಭೆ

     
     ಕಾಸರಗೋಡು:   ಜಿಲ್ಲಾ ಯೋಜನೆ ಸಮಿತಿ ಸಭೆ ಜ.20ರಂದು ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ನಡೆಯಲಿದೆ.
            ಯೋಜನೆಗೆ ಆಡಳಿತೆ ಮಂಜೂರಾತಿ:
    ಕಯ್ಯೂರು-ಚೀಮೇನಿ ಗ್ರಾಮಪಂಚಾಯತ್ ನ ಕುಟ್ಟಮತ್-ಕಯ್ಯೂರು ಚೀಮೇನಿ ರಸ್ತೆಯ ಮೆಕ್ ಡಾಂ ಡಾಮರೀಕರಣಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿ ಆಡಳಿತಾನುಮತಿ ನೀಡಿದೆ. 4.96 ಕೋಟಿ ರೂ. ಈ ಯೋಜನೆಗಾಗಿ ಮೀಸಲಿರಿಸಲಾಗಿದೆ. ಕಯ್ಯೂರು ಮೂಲಕ ಚೀಮೇನಿ ಜಂಕ್ಷನ್ ವರೆಗೆ 13.7 ಕಿಮೀ ಉದ್ದ ಹೊಂದಿರುವ ಈ ರಸ್ತೆಯ ನವೀಕರಣಕ್ಕೆ ತ್ರಿಕರಿಪುರ ಶಾಸಕ ಎಂ.ರಾಜಗೋಪಾಲ್ ಶಿಫಾರಸು ನೀಡಿದ್ದರು.
      ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಎಲ್.ಎಲ್.ಜಿ.ಡಿ. ಕಾರ್ಯಕಾರಿ ಇಂಜಿನಿಯರ್ ಟಿ.ಮಣಿಕಂಠ ಕುಮಾರ್ , ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.   
        ಜಿಲ್ಲಾ ಮಟ್ಟದ ಟಾಸ್ಕ್ ಫೆÇೀರ್ಸ್ ಸಭೆ:
    ಬಾಲಕಾರ್ಮಿಕತನ ಮತ್ತು ಇತರ ರಾಜ್ಯಗಳ ಕಾರ್ಮಿಕರ ವಲಯದ ನೌಕರಿ ಶೋಷಣೆ ನಿಯಂತ್ರಿಸುವ ಕ್ರಮ ಬಿಗಿಗೊಳಿಸಲು ಜಿಲ್ಲಾ ಮಟ್ಟದ ಟಾಸ್ಕ್ ಫೆÇೀರ್ಸ್ ಸಭೆ ನಿರ್ಧರಿಸಿದೆ.
         ಜಿಲ್ಲಾಧಿಕಾರಿ ಛೇಂಬರ್ ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಪ್ರತಿತಂಗಳ ಒಂದನೇ ತಾರೀಕಿನಂದು ಬಾಕಾರ್ಮಿಕನ ವಿರುದ್ಧ ದಾಳಿ ನಡೆಸಲು ಸಭೆ ತೀರಾನಿಸಿದೆ. ಜಿಲ್ಲಾ ಕಾರ್ಮಿಕ ಅಧಿಕಾರಿ, ಶಿಶು ರಕ್ಷಣೆ ಅಧಿಕಾರಿ, ಪೆÇಲೀಸ್,ವಲಯ ಕಂದಾಯಧಿಕಾರಿ, ಸಿಬ್ಬಂದಿ ಸೇರಿರುವ ತಂಡ ಈ ಕರ್ತವ್ಯ ನಡೆಸಲಿದೆ. ಪ್ರತಿತಿಂಗಳ 2ನೇ ತಾರೀಇನಂದು ಈ ಸಂಬಂಧ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕು. ಜಿಲ್ಲಾ ಮಟ್ಟದ ಕ್ರಷರ್ ಯೂನಿಟ್ ಗಳಲ್ಲಿ ಬಾಲಕಾರ್ಮಿಕನ ನಿಯಂತ್ರಿಸುವ ನಿಟ್ಟಿನಲ್ಲಿ ಮಿಂಚಿನದಾಳಿ ನಡೆಸಲಾಗುವುದು. ಕಾನೂನು ಉಲ್ಲಂಘಿಸಿ ಇತರ ರಾಜ್ಯಗಳ ಕಾರ್ಮಿಕರಿಗೆ ಸಾಮೂಹಿಕವಾಗಿ ವಸತಿ ಸಔಲಭ್ಯ ಒದಗಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇತರ ರಾಜ್ಯಗಳ ಕಾರ್ಮಿಕರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗುತ್ತಿರುವ ಆವಾಸ್ ಯೋಜನೆಯನ್ನು ವಿಸ್ತೃತಗೊಳಿಸಲು, ಬಾಲಕಾರ್ಮಿಕತನ ವಿರುದ್ಧ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಸಭೆ ತೀರ್ಮಾನಿಸಿದೆ. ಅಕ್ರಮ ಮರಳು ಹೂಳೆತ್ತುವಿಕೆ, ಸಾಗಾಟ ಸಹಿತ ಇತ್ಯಾದಿ ಕಾನೂನು ಉಲ್ಲಂಘನೆ ಪರಕರಣಗಳಲ್ಲಿ ಇತರ ರಾಜ್ಯಗಳ ಕರ್ಮಿಕರನ್ನು ಬಳಸಿಕೊಳ್ಳುವುದನ್ನು ತಡೆಯುವಂತೆ ಜಿಲ್ಲಾಧಿಕಾರಿ ಆದೇಶಿಸಿದರು.
       ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ದೇವದಾಸ್, ಡಿ.ಎಲ್.ಎಸ್.ಎ. ಸೆಕ್ಷನ್ ಅಧಿಕಾರಿ ಕೆ.ದಿನೇಶ, ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು, ರೆಸ್ಕ್ಯೂ ಅಧಿಕಾರಿ ಬಿ.ಅಶ್ವಿನ್, ಕಾಸರಗೋಡು ಶಿಕ್ಷಣಾಧಿಕಾರಿ ಸಂದಿಕೇಶನ್, ಡಿ.ವೈ.ಎಸ್.ಪಿ. ಸತೀಷ್ ಕುಮಾರ್, ಶಿಶು ಕಲ್ಯಾಣ ಸಮಿತಿ ಕಾರ್ಯದರ್ಶಿ ಮಧು ಮುದಿಯಕ್ಕಾಲ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries