ಕಾಸರಗೋಡು: ಕೋಳಿಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯಾಗಿ ಬಡ್ತಿಗೊಳಿಸುವ ಶಾಲಾ ಅಧಿಕಾರಿಗಳ ಮತ್ತು ಸಾರ್ವಜನಿಕರ ಬೇಡಿಕೆಯನ್ನು ಶಿಕ್ಷಣ ಸಚಿವರ ಗಮನಕ್ಕೆ ತರುವುದಾಗಿ ಕಂದಾಯ ಸಚಿವ ಇ.ಚಂದ್ರಶೇಖರನ್ ಭರವಸೆ ನೀಡಿದ್ದಾರೆ.
ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಕೆ.ಕುಂಞ ರಾಮನ್ ಅಧ್ಯಕ್ಷತೆ ವಹಿಸಿದ್ದರು. ಚೆಮ್ನಾಡ್ ಗ್ರಾಮಪಂಚಾಯತ್ ಅಧ್ಯಕ್ಷ ಕಲ್ಲಟ್ರ ಅಬ್ದುಲ್ ಖಾದರ್, ಜಿಲ್ಲಾ ಪಂಚಾಯತ್ ಸದಸ್ಯ ಸುಫೈಝಾ ಅಬೂಬಕ್ಕರ್, ಕಾಸರಗೋಡು ಬ್ಲೋಕ್ ಪಂಚಾಯತ್ ಅಭಿವೃದ್ಧಿ ಸ್ಥಾಯೀಸಮಿತಿ ಅಧ್ಯಕ್ಷ ಟಿ.ಡಿ.ಕಬೀರ್, ಗ್ರಾಮಪಂಚಾಯತ್ ಅಭಿವೃದ್ಧಿ ಸ್ಥಾಯೀಸಮಿತಿ ಅಧ್ಯಕ್ಷ ಷಂಸುದ್ದೀನ್ ತೆಕ್ಕಿಲ್, ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಷಾಸಿಯಾ, ಸದಸ್ಯರಾದ ವಿ.ಗೀತಾ, ಎನ್.ವಿ.ಬಾಲನ್, ಮಾಯಾ ಕರುಣಾಕರನ್, ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿದರು. ಶಾಲೆಯ ಮುಖ್ಯಶಿಕ್ಷಕ ಎನ್.ವಿ.ತಂಗಪ್ಪನ್ ವರದಿ ವಾಚಿಸಿದರು. ಸ್ಟಾಫ್ ಸೆಕ್ರೆಟರಿ ಜಿ.ವಿ.ವಿಜಿಮೋನ್ ವಂದಿಸಿದರು.
ನೂತನ ಕಟ್ಟಡದಲ್ಲಿ ಸಾರ್ವಜನಿಕ ಸಂಸ್ಥೆ ಹಿಂದೂಸ್ತಾನ್ ಏರ್ ನಾಟಿಕ್ಸ್ ನಿಗಮದ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ 20 ಲಕ್ಷರೂ. ಲಭಿಸಿದ್ದು, ಈ ಮೊಬಲಗಿನಿಂದ ಮೂರು ತರಗತಿ ಕೊಠಡಿಗಳು, ಮೂರು ಶೌಚಾಲಯಗಳು, ಎಸ್.ಎಸ್.ಕೆ. ನಿಧಿ ಬಳಸಿ ಒಂದು ತರಗತಿ ಕೊಠಡಿ, ಕಾಸರಗೋಡು ಬ್ಲೋಕ್ ಪಂಚಾಯತ್ ನ 5 ಲಕ್ಷ ರೂ.ವೆಚ್ಚದಲ್ಲಿ ಶೌಚಾಲಯ ಸಂಕೀರ್ಣ ನಿರ್ಮಿಸಲಾಗಿದೆ.


