ಮಂಜೇಶ್ವರ: ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಸಂಘಟಿಸಿದ ಕನ್ನಡ ವಾಚನ ಸ್ಪರ್ಧೆಯ ಕನ್ನಡ ವಾಚನ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದ್ದು, ಕಾಸರಗೋಡು ತಾಲೂಕು ಮಟ್ಟದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸೃಜನಾ ಕೆ.ಆರ್ ಪ್ರಥಮ ಬಹುಮಾನ ಪಡೆದಿದ್ದಾಳೆ. ಕಾಸರಗೋಡು ಸರ್ಕಾರಿ ಫ್ರೌಢಶಾಲೆಯ ಲಕ್ಷಿತಾ ಎ.ಕೆ.ದ್ವಿತೀಯ ಹಾಗೂ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಕೃತಿ ಅರಿಪಾದೆ ತೃತೀಯ ಬಹುಮಾನ ಗಳಿಸಿದ್ದಾಳೆ.
ಹೊಸದುರ್ಗ ತಾಲೂಕು ಮಟ್ಟದಲ್ಲಿ ದುರ್ಗಾ ಉನ್ನತ ಫ್ರೌಢಶಾಲೆ ಕಾಞಂಗಾಡಿನ ರಕ್ಷಿತಾ ಬಿ ಪ್ರಥಮ, ಉದುಮ ಸರ್ಕಾರಿ ಶಾಲೆಯ ದೀಪಿಕಾ ಕೆ.ಬಿ.ದ್ವಿತೀಯ,ಉದುಮ ಸರ್ಕಾರಿ ಶಾಲೆಯ ಸುಚಿತ್ರಾ ಎ ಹಾಗೂ ಉದುಮ ಉನ್ನಡ ಫ್ರಢಶಾಲೆಯ ವಿದ್ಯಾ ಎನ್ ತೃತೀಯ ಬಹುಮಾನ ಗಳಿಸಿದ್ದಾರೆ. ವಿಜೇತರಿಗೆ ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಪಿ.ವಿ.ಕೆ.ಪನೆಯಾಲ್ ಹಾಗೂ ವಾಚನ ಸ್ಪರ್ಧೆಯ ಸಂಚಾಲಕ ಅಹಮ್ಮದ್ ಹುಸೈನ್ ಪಿ.ಕೆ ಅಭಿನಂದನೆ ಸಲ್ಲಿಸಿದ್ದಾರೆ.

