ಮಂಜೇಶ್ವರ: ಬಂಗ್ರಮಂಜೇಶ್ವರ ಕೋಟಗರಿ ಶ್ರೀ ವಯನಾಡು ದೈವ ಮತ್ತು ಶ್ರೀ ಪಂಜುರ್ಲಿ ದೈವದ ದೈವಸ್ಥಾನದ ಕಾಲಾವಧಿ ಪರ್ವ ಮತ್ತು ನೇಮೋತ್ಸವವು ಜ.25 ರಂದು ಶನಿವಾರ ಜರಗಲಿದೆ.
ಬೆಳಗ್ಗೆ 6 ಕ್ಕೆ ಗಣಹೋಮ, 10.30 ಕ್ಕೆ ನಾಗತಂಬಿಲ, ನಂತರ ಮಹಾಪೂಜೆ, ವೆಂಕಟರಮಣ ದೇವರ ಮುಡಿಪು ಶುದ್ಧಿ, ಕಾಲಾವಧಿ ಪರ್ವ ಪಂಜುರ್ಲಿ ದೈವದ ನೇಮೋತ್ಸವ, ಗುಳಿಗ ಮತ್ತು ಕೊರತಿ ದೈವದ ಕೋಲ ಹಾಗು ಅನ್ನಸಂತರ್ಪಣೆ ಜರಗಲಿದೆ. ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಬಡಾಜೆಬೂಡು ನೇತೃತ್ವ ವಹಿಸಲಿರುವರು. ಪಂಜುರ್ಲಿ ದೈವಕ್ಕೆ ತುಲಾಭಾರ ಸೇವೆ ಜರಗಲಿರುವುದು.
ಜ.26 ರಂದು ಮರುಪುತ್ತರಿ ಸೇವೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಯಶಸ್ಸುಗೊಳಿಸಬೇಕೆಂದು ವಿನಂತಿಸಲಾಗಿದೆ

