ಕುಂಬಳೆ: ಮೀಯಪದವು ಶ್ರೀ ವಿದ್ಯಾವರ್ಧಕ ಶಾಲೆಯ ಅಧ್ಯಾಪಕಿ, ಚಿಗುರುಪಾದೆ ನಿವಾಸಿ ಬಿ.ಕೆ.ರೂಪಶ್ರೀ (40) ಅವರ ಸಾವು ಕೊಲೆಕೃತ್ಯವಾಗಿದೆ ಎಂದು ಕ್ರೈಂಬ್ರಾಂಚ್ ನಡೆಸಿದ ತನಿಖೆಯಿಂದ ಸಾಬೀತುಗೊಂಡಿದೆ. ಈ ಹಿನ್ನೆಲೆಯಲ್ಲಿ ರೂಪಶ್ರೀ ಸಹೋದ್ಯೋಗಿಯಾದ ಇದೇ ಶಾಲೆಯ ಅಧ್ಯಾಪಕ ವೆಂಕಟರಮಣ ಕಾರಂತ(39) ಹಾಗೂ ಈತನ ಸಹಾಯಕನಾದ ಕಾರು ಚಾಲಕ ನಿರಂಜನ(34)ನನ್ನು ಬಂಧಿಸಲಾಗಿದೆ.
ಇವರನ್ನು ಇನ್ನಷ್ಟು ತನಿಖೆಗೊಳಪಡಿಸಲಾಗಿದ್ದು, ಇನ್ನಷ್ಟು ಮಾಹಿತಿಗಳನ್ನು ಕಲೆಹಾಕಲಾಗುವುದು ಎಂದು ತನಿಖಾ ತಂಡವು ತಿಳಿಸಿದೆ. ಅಧ್ಯಾಪಕಿಯನ್ನು ಮನೆಗೆ ಕರೆಸಿ ಅವರನ್ನು ಬಕೆಟ್‍ನಲ್ಲಿದ್ದ ನೀರನಲ್ಲಿ ಮುಳುಗಿಸಿ ಕೊಲೆಗೈದು ಮೃತ ದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಕಾರಿನಲ್ಲಿ ಕೊಂಡೊಯ್ದು ಸಮುದ್ರಕ್ಕೆ ಎಸೆದಿರುವುದಾಗಿ ತನಿಖೆಯಲ್ಲಿ ಆರೋಪಿಗಳು ತಪೆÇ್ಪಪ್ಪಿಕೊಂಡಿದ್ದಾರೆಂದು ತನಿಖಾ ತಂಡವು ತಿಳಿಸಿದೆ. ಈ ಕೃತ್ಯವನ್ನು ಅಧ್ಯಾಪಕ ವೆಂಕಟರಮಣ ಕಾರಂತ ನಿರಂಜನನ ಸಹಾಯದಿಂದ ನಡೆಸಿದ್ದಾನೆಂದು ಒಪ್ಪಿಕೊಂಡಿದ್ದಾನೆ. ಮೃತದೇಹವನ್ನು ಕೊಂಡೊಯ್ದ ಕಾರನ್ನು ಪೆÇಲೀಸರು ತಮ್ಮ ವಶಕ್ಕೆ ತೆಗೆದು ಕೊಂಡಿದ್ದಾರೆ.
ರೂಪಶ್ರೀಯ ನಾಪತ್ತೆಯಾದ ಮೊಬೈಲ್ ಫೆÇೀನ್ ಪತ್ತೆಯಾದ ಬೆನ್ನಲ್ಲೇ ವ್ಯಾನಿಟಿ ಬ್ಯಾಗ್ ಕೂಡ ಗುರುವಾರ ಪತ್ತೆಯಾಗಿದೆ. ಜ.16ರಂದು ಮಧ್ಯಾಹ್ನದ ನಂತರ ನಿಗೂಢ ಸ್ಥಿತಿಯಲ್ಲಿ ನಾಪತ್ತೆಯಾದ ರೂಪಶ್ರೀ ಜ.18ರಂದು ಬೆಳಗ್ಗೆ ಕುಂಬಳೆ ಪೆರುವಾಡು ಕಡಪ್ಪುರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹ ಬಹುತೇಕ ನಗ್ನವಾಗಿತ್ತು. ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ನೀರಿನಲ್ಲಿ ಮುಳುಗಿ ರೂಪಶ್ರೀ ಸಾವಿಗೀಡಾಗಿರುವುದಾಗಿ ತಿಳಿದುಬಂದಿತ್ತು. ಆದರೆ ಸಮುದ್ರಕ್ಕೆ ತಲುಪಿದ ಸಾಧ್ಯತೆಯ ಕುರಿತು ಸಮಗ್ರ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಮರಣೋತ್ತರ ಪರೀಕ್ಷೆ ಉಸ್ತುವಾರಿ ವಹಿಸಿದ್ದ ಡಾ.ಕೆ.ಗೋಪಾಲಕೃಷ್ಣ ಪಿಳ್ಳೆ ಅವರು ಪೆÇಲೀಸರಿಗೆ ನಿರ್ದೇಶಿಸಿದ್ದರು. ಇದರಂತೆ ಮೊದಲಿಗೆ ಸ್ಥಳೀಯ ಮಂಜೇಶ್ವರ ಮತ್ತು ಕುಂಬಳೆ ಪೆÇಲೀಸರ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಆದರೆ ಸಾವಿನಲ್ಲಿ ಇನ್ನಷ್ಟು ನಿಗೂಢತೆ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ತನಿಖೆಯನ್ನು ಜಿಲ್ಲಾ ಕ್ರೈಂ ಬ್ರಾಂಚ್‍ಗೆ ಹಸ್ತಾಂತರಿಸಲಾಗಿತ್ತು. ತನಿಖೆ ಆರಂಭಿಸಿದ ಕ್ರೈಂ ಬ್ರಾಂಚ್ ತಂಡವು ವಿವಿಧ ದಿಶೆಗಳಲ್ಲಿ ತನಿಖೆ ಮುಂದುವರಿಸಿದ್ದು, ಇದೊಂದು ಕೊಲೆಯೆಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಇದಕ್ಕೆ ಕಾರಣನಾದ ಸಹೋದ್ಯೋಗಿಯನ್ನು ವಶಕ್ಕೆ ತೆಗೆದು ತನಿಖೆಗೊಳಪಡಿಸಿದಾಗ ಆತ ತಪೆÇ್ಪಪ್ಪಿಕೊಂಡಿದ್ದಾನೆ. ರೂಪಶ್ರೀ ಅವರ ಸಾವಿನ ಬೆನ್ನಲ್ಲೇ ಅವರ ಮೊಬೈಲ್ ಫೆÇೀನ್ ನಾಪತ್ತೆಯಾಗಿತ್ತು. ಅನಂತರ ಒಂದೆಡೆಯಿಂದ ಬೇರೆಡೆಗೆ ಅದನ್ನು ಸ್ಥಳಾಂತರಿಸಲಾಗಿತ್ತು. ಇದನ್ನು ಕೇಂದ್ರೀಕರಿಸಿ ತನಿಖೆ ಮುಂದುವರಿಯುತ್ತಿದ್ದಂತೆ ಅಧ್ಯಾಪಕಿಯ ವ್ಯಾನಿಟಿ ಬ್ಯಾಗ್ ಗುರುವಾರ ಕಣ್ವತೀರ್ಥ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಬ್ಯಾಗ್‍ನೊಳಗೆ ಕಂಡುಬಂದ ಗುರುತು ಚೀಟಿಯಿಂದ ಅದು ರೂಪಶ್ರೀಯವರದ್ದೆಂದು ದೃಢಪಟ್ಟಿತು. ಇತರ ಕೆಲವು ಚೀಟಿಗಳೂ ಈ ಬ್ಯಾಗ್‍ನಲ್ಲಿದ್ದವು. ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.
ಜಿಲ್ಲಾ ಕ್ರೈಂ ಬ್ರಾಂಚ್ ಡಿವೈಎಸ್‍ಪಿ ಸತೀಶ್‍ಕುಮಾರ್, ಎಸ್.ಐ. ಬಾಬು, ಮಂಜೇಶ್ವರ ಅಡಿಶನಲ್ ಎಸ್.ಐ. ಪಿ.ಬಾಲಚಂದ್ರನ್, ಕುಂಬಳೆ ಪೆÇಲೀಸ್ ಠಾಣೆಯ ಸಿವಿಲ್ ಪೆÇಲೀಸ್ ಆಫೀಸರ್ ಪ್ರದೀಶ್ ಗೋಪಾಲ್ ನೇತೃತ್ವದ ವಿಶೇಷ ತನಿಖಾ ತಂಡ ಪ್ರಕರಣವನ್ನು ಬಯಲಿಗೆಳೆದಿದೆ. ರೂಪಶ್ರೀಯವರ ಸಾವು ಕೊಲೆಕೃತ್ಯ ಎಂಬುದಾಗಿ ಆರಂಭದಿಂದಲೇ ಶಂಕೆ ಮೂಡಿತ್ತು. ಮೊಬೈಲ್ ಫೆÇೀನ್ ನಾಪತ್ತೆಯಾಗಿ ಬಳಿಕ ಪತ್ತೆಯಾಗಿರುವುದು ಹಾಗೂ ಮೃತ ದೇಹ ನಗ್ನ ಸ್ಥಿತಿಯಲ್ಲಿ ಕಂಡುಬಂದಿರುವುದು ಮುಂತಾದ ಘಟನೆಗಳು ಸಾರ್ವಜನಿಕರ ಸಂಶಯಕ್ಕೆ ಪುಷ್ಠಿ ನೀಡಿದ್ದವು.
ಕಾರಿನಲ್ಲಿ ಕಂಡು ಬಂದ ಕೂದಲಿನಿಂದ ಕೊಲೆ ಕೃತ್ಯ ಸಾಬೀತು : ವಿಚಾರಣೆಯನ್ನು ಎದುರಿಸಿದ ಶಾಲಾ ಅಧ್ಯಾಪಕ ವೆಂಕಟರಮಣ ಕಾರಂತನ ಕಾರಿನಲ್ಲಿ ನೀಳದ ಕೂದಲು ಪತ್ತೆಯಾದ ಹಿನ್ನೆಲೆಯಲ್ಲಿ ಅಧ್ಯಾಪಕಿ ರೂಪಶ್ರೀಯನ್ನು ಕೊಲೆಗೈಯಲಾಗಿದೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಯಿತು.
ಕಣ್ಣೂರಿನಿಂದ ಬಂದ ಫಾರೆನ್ಸಿಕ್ ತಜ್ಞರು ಕಾರನ್ನು ಪರಿಶೀಲಿಸಿದಾಗ ಮಹಿಳೆಯ ಕೂದಲು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ.
ಕೊಲೆಗೈದ ಬಳಿಕ ಮೃತ ದೇಹವನ್ನು ಕೊಂಡೊಯ್ದು ಸಮುದ್ರಕ್ಕೆ ಎಸೆಯಲು ಬಳಸಿದ ಸ್ವಿಪ್ಟ್ ಕಾರಿನಲ್ಲಿ ಕೂದಲು ಪತ್ತೆಯಾಗಿದೆ. ಹಣಕಾಸಿನ ವ್ಯವಹಾರ ಇವರ ಮಧ್ಯೆ ಇತ್ತೆಂದು, ಈ ಹಿನ್ನೆಲೆಯಲ್ಲಿ ಕೊಲೆ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.


