ಮಂಜೇಶ್ವರ: ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವ ಕನ್ನಡ ನಾಟಕ ಸ್ಪಧೆ9ಯಲ್ಲಿ ಮಂಜೇಶ್ವರ ಗೋವಿಂದ ಪೈ ಸರ್ಕಾರಿ ಕಾಲೇಜು ವಿದ್ಯಾಥಿ9ಗಳು ಮನೋಜ್ಞವಾಗಿ ಅಭಿನಯಿಸಿದ ರಂಗ ನಿದೇ9ಶಕ ಉದಯ ಸಾರಂಗ ರಚಿಸಿ ನಿದೇ9ಶಿಸಿದ ಸಿಡಿಲ ಹಕ್ಕಿ ನಾಟಕ ಎ ಶ್ರೇಣಿಯೊಂದಿಗೆ ಪ್ರಥಮ ಸ್ಥಾನ ಪಡೆಯಿತು.
ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಮೇಲಿನ ನಡೆಯುವ ದೌಜ9ನ್ಯದ ಮೇಲೆ ಸುತ್ತ ಹೆಣೆದ ಕಥಾ ಹಂದರದೊಂದಿಗೆ ಹೆಣ್ಣು ಸಿಡಿದು ನಿಂತರೆ ಏನಾಗಬಹುದು ಎಂಬುದು ಸುಂದರ ಕ್ಲೈಮ್ಯಾಕ್ಸ್ ನ್ನು ಒಳಗೊಂಡಿದೆ. ಈ ಯಶಸ್ವಿ ನಾಟಕದ ಹಿಂದೆ ಶಶಿ ಎದ್ರುತೋಡು, ಅಶೋಕ ಮಾಸ್ತರ್ ಕೊಡ್ಲಮೊಗರು, ಶರಣ್ ಕಾಟುಕುಕ್ಕೆ ಸಹಕರಿಸಿದ್ದಾರೆ. ಉದಯ ಕಿಳಿಂಗಾರ್ ರಂಗವಿನ್ಯಾಸ, ಶಿವ ಅಡ್ಯನಡ್ಕ ಬೆಳಕು ಸಂಯೋಜನೆ ಮಾಡಿದ್ದಾರೆ. ಕಾಲೇಜು ಉಪನ್ಯಾಸಕಿ ಕವಯತ್ರಿ ಲಕ್ಷ್ಮೀ ನೇತೃತ್ವ ನೀಡಿದ್ದಾರೆ. ಅಭಿನಯಿಸಿದ ವಿದ್ಯಾಥಿ9ಗಳು ನವ್ಯ ಮಂಗಲ್ಪಾಡಿ, ರಾಜೇಶ್ ನೆಲ್ಲಿಕಟ್ಟೆ, ಚೇತನ್ ಕುಮಾರ್ ಬಾರಿಕ್ಕಾಡು, ಸಂಗೀತಾ ಪಚ್ಲಂಪಾರೆ, ರಶ್ಮೀತಾ ಬೋವಿಕ್ಕಾನ, ಕಾವ್ಯ ಬಾಯಾರ್, ರಂಜಿತಾ ಪಟ್ಟಾಜೆ, ಭವ್ಯ ಪಾಂಡಿ, ಸಂಗಿತದಲ್ಲಿ ಯಜ್ಞೇಶ್ ಕಳತ್ತೂರು, ದೇವಿಕಾ ಮಾಡಿರುತ್ತಾರೆ.
ದ್ವಿತೀಯ ಸ್ಥಾನ ರಾಜಪುರಂ ಕಾಲೇಜುನ ಪ್ರವೀಣ್ ಕಾಡಗಂ ನಿದೇ9ಶಿಸಿದ 'ಆರನೇಯ ದಿನ' ನಾಟಕ ಹಾಗೂ ತೃತೀಯ ಸ್ಥಾನ ಗುರುದೇವ ಕಾಲೇಜು ಪಯ್ಯನ್ನೂರಿನ ರತೀಶ್ ಕಾರಡ್ಕ ನಿದೇ9ಶಿಸಿದ ನಾಗಮಂಡಲ ನಾಟಕ ಪಡೆದುಕೊಂಡಿದೆ. ಉತ್ತಮ ನಟ ಮುನ್ನಾಡ್ ಕಾಲೇಜಿನ ವಿನು ಬೋವಿಕ್ಕಾನ ನಿದೇ9ಶಿಸಿದ ಕೋವಿ ನಾಟಕದ ಆಕಾಶ್, ಹಾಗೂ ಉತ್ತಮ ನಟಿ ಕಾಸರಗೋಡು ಸರ್ಕಾರಿ ಕಾಲೇಜು ಅಭಿನಯಿಸಿದ ಪ್ರಶೋಬ್ ನಿದೇ9ಶಿಸಿದ ಬಣ್ಣಗಳು ನಾಟಕದ ಅನುರಾಧ ಪಡೆದಿರುತ್ತಾರೆ. ಒಟ್ಟು ಆರು ತಂಡಗಳು ಭಾಗವಹಿಸಿ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಶ್ರೇಷ್ಠ ಕೊಡುಗೆ ನೀಡಿದ್ದು ಪ್ರಶಂಸನೆಗೆ ಪಾತ್ರವಾಗಿದೆ.





