ಮಂಜೇರ್ಶವರ: ಕನಿಲ ಫ್ರೆಂಡ್ಸ್ ಕ್ಲಬ್‍ನ ಸರ್ವ ಸದಸ್ಯರ ಮಹಾಸಭೆ ಸೋಮವಾರ ಸಂಜೆ ಕನಿಲದಲ್ಲಿ ಕಮಲಾಕ್ಷ ಕನಿಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಸಂತೋಷ್ ಕನಿಲ, ಅಧ್ಯಕ್ಷರಾಗಿ ಕಮಲಾಕ್ಷ ಕನಿಲ, ಉಪಾಧ್ಯಕ್ಷರಾಗಿ ಗಿರೀಶ್ ಪಿರಾರಮೂಲೆ ಹಾಗೂ ಭಾಗ್ಯಚಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಿತ್ ಹೊಸಂಗಡಿ, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ಕನಿಲ, ಖಜಾಂಜಿಯಾಗಿ ಅನಿಲ್ ಕನಿಲ, ಕ್ರೀಡಾ ಕಾರ್ಯದರ್ಶಿಯಾಗಿ ಸಚಿನ್ ಕನಿಲ ಸಹಿತ ಪ್ರಮುಖರನ್ನು ಉಪ ಸಮಿತಿಗಳಿಗೆ ಆರಿಸಲಾಯಿತು.
ಸಭೆಯಲ್ಲಿ ನಿರ್ಗಮಿತ ಕಾರ್ಯದರ್ಶಿ ಅನಿಲ್ ಕನಿಲ ವರದಿ ಮಂಡಿಸಿ ಸ್ವಾಗತಿಸಿದರು. ಪ್ರವೀಣ್ ಕನಿಲ ವಂದಿಸಿದರು. ಜೊತೆಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಿತು.


