ಕುಂಬಳೆ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಕಾಮದುಘಾ ಯೋಜನೆಯನ್ವಯ ಕಾರ್ಯಾಚರಿಸುವ ಅಮೃತಧಾರಾ ಗೋಶಾಲೆ, ಗೋಲೋಕ, ಬಜಕೂಡ್ಲುವಿನ ಗೋವುಗಳ ಮೇವಿಗಾಗಿ ಮುಳಿಹುಲ್ಲು ಸಂಗ್ರಹಿಸುವ ಶ್ರಮದಾನವು ಪೆÇಸಡಿ ಗುಂಪೆಯ ಶ್ರೀ ಶಂಕರ ಧ್ಯಾನ ಮಂದಿರದ ಪರಿಸರದಲ್ಲಿ ಇತ್ತೀಚೆಗೆ ನಡೆಯಿತು.
ಗುಂಪೆ ವಲಯ ಬಿಂದು-ಸಿಂಧು ಪ್ರಧಾನ ಶಂಕರನಾರಾಯಣ ಗುಂಪೆ ಧ್ವಜಾರೋಹಣಗೈದರು. ಮುಳ್ಳೇರಿಯಾ ಮಂಡಲ ವಿದ್ಯಾರ್ಥಿ ವಾಹಿನಿ ಪ್ರಮುಖ ಗುರುಮೂರ್ತಿ ಮೇಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಳ್ಳೇರಿಯಾ ಮಂಡಲ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಬಜಕೂಡ್ಲು ಗೋ ಶಾಲೆ ಸಹಕಾರ್ಯದರ್ಶಿ ಗಣರಾಜ ಕಡಪ್ಪು ಈ ವೇಳೆ ಉಪಸ್ಥಿತರಿದ್ದರು. ಬಳಿಕ ಬಜಕೂಡ್ಲು ಗೋಶಾಲೆಯ ಗೋವುಗಳಿಗಾಗಿ ಗೋ ಸೇವಕರು ಮೇವು ಸಂಗ್ರಹಿಸಿದರು. ಬೆತ್ತಕಾಡು ಪರಮೇಶ್ವರಿ ಅಮ್ಮ ಅವರು ಗೋ ಸೇವಕರಿಗೆ ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು. ಸಂಗ್ರಹಿಸಿದ ಮುಳಿಹುಲ್ಲನ್ನು ಗೋ ಶಾಲಾ ಸಮಿತಿಯವರು ಬಜಕೂಡ್ಲು ಗೋ ಶಾಲೆಗೆ ಸಾಗಿಸಿದರು.


