HEALTH TIPS

ಜ.24 ರಂದು ಕಯ್ಯಾರು ಡೋನ್ ಬೋಸ್ಕೊ ಶಾಲಾ ವಾರ್ಷಿಕೋತ್ಸವ


    ಉಪ್ಪಳ: ಕಯ್ಯಾರು ಡೋನ್ ಬೋಸ್ಕೊ ಎ.ಯು.ಪಿ. ಶಾಲೆಯ 84 ನೇ ವಾರ್ಷಿಕೋತ್ಸವ  ಜನವರಿ 24 ರಂದು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 
      ಅಂದು ಸಂಜೆ 6 ಗಂಟೆಯಿಂದ ಸಾಂಸ್ಕøತಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಾತ್ರಿ 7.30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾದರ್ ಆ್ಯಂಟನಿ ಎಂ.ಶೆರಾ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯೆ ರಾಜೀವಿ ರೈ, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ  ವಿ, ಬ್ಲಾಕ್ ಯೋಜನಾಧಿಕಾರಿ  ಗುರುಪ್ರಸಾದ್ ರೈ, ಶಾಲಾ ಸಂಚಾಲಕ ಫಾದರ್ ಐವನ್ ಪೀಟರ್ ಡಿ'ಮೆಲ್ಲೊ, ಕಯ್ಯಾರು ಕ್ರಿಸ್ತ ರಾಜ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷ ಜೋರ್ಜ್ ಡಿ'ಅಲ್ಮೇಡಾ, ಶಾಲಾ ಮುಖ್ಯೋಪಾಧ್ಯಾಯ  ಪೀಟರ್ ರೋಡ್ರಿಗಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಿದಾನಂದ ಮಯ್ಯ, ಮಾತೃಸಂಘದ ಅಧ್ಯಕ್ಷೆ ರೇಣುಕಾ, ಶಾಲಾ ನಾಯಕಿ ಅರಣ್ಯ ಟಿ.ಶಾಜಿ  ಮೊದಲಾದವರು ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ವಾರ್ಷಿಕೋತ್ಸವದಂಗವಾಗಿ ಜನವರಿ 23 ರಂದು  ಕ್ರೀಡಾದಿನವನ್ನು ಆಚರಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ವಿವಿಧ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries