ಮಂಜೇಶ್ವರ: ಮೀಂಜ ಗ್ರಾಮದ ಕುದ್ದುಪದವು ಶ್ರೀ ಕೊರತಿಗುಳಿಗ ದೈವ ಕ್ಷೇತ್ರದಲ್ಲಿ ನೇಮೋತ್ಸವವು ಫೆ.29ರಂದು ಜರಗಲಿದೆ. ಬೆಳಗ್ಗೆ 8 ಕ್ಕೆ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ಗಣಹೋಮ, ತಂಬಿಲ, ಸಾಮೂಹಿಕ ಪ್ರಾರ್ಥನೆ, 9 ರಿಂದ ಸಂಜೆ 5 ರ ವರೆಗೆ ವಿವಿಧ ತಂಡಗಳಿಂದ ಭಜನೆ, ವಸಂತಭಟ್ ತೊಟ್ಟೆತ್ತೋಡಿ ದೀಪ ಪ್ರಜ್ವಲೆನೆಗೈಯಲಿರುವರು.
ಸಂಜೆ 6 ಕ್ಕೆ ಶ್ರೀ ದೈವಗಳ ಭಂಡಾರ ಏರುವುದು, 6.30ಕ್ಕೆ ನೃತ್ಯ ಕಾರ್ಯಕ್ರಮ, 7 ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಕೃಷ್ಣಪ್ಪ ಪೂಜಾರಿ ದೇರಂಬಳ ಅಧ್ಯಕ್ಷತೆ ವಹಿಸಲಿರುವರು. ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿವರ್ಯರು ಆಶೀರ್ವಚನಗೈಯ್ಯಲಿರುವರು. ಮುಖ್ಯ ಅತಿಥಿಗಳಾಗಿ ಶ್ರೀರಾಮ ಮೂಡಿತ್ತಾಯ ಪಾಂಡ್ಯಡ್ಕ, ಬಿ.ವಿ.ರಾಜನ್, ದಿನೇಶ್ ಡಿ.ದೇರಂಬಳ ಭಾಗವಹಿಸಲಿರುವರು. ರಾತ್ರಿ 8 ರಿಂದ ಶ್ರೀ ದೈವಗಳ ಗಗ್ಗರ ಸೇವೆ, ಕೆಂಡಸೇವೆ, ನೇಮೋತ್ಸವ ನಡೆಯಲಿದೆ. 9.30ರಿಂದ ಅನ್ನಸಂತರ್ಪಣೆ, 10 ಕ್ಕೆ ಶ್ರೀ ದೈವಗಳ ಪ್ರಸಾದ ವಿತರಣೆ, 11.30ರಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಮಂಡಳಿಯಿಂದ `ಬಪ್ಪನಾಡು ಕೇತ್ರ ಮಹಾತ್ಮೆ' ಎಂಬ ಯಕ್ಷಗಾನ ಬಯಲಾಟ ಜರಗಲಿರುವುದು.

