ಮಂಜೇಶ್ವರ: ಬಿ.ಎಂ.ಎಸ್. ಸಂಘಟನೆಯ ಆಟೋ ಚಾಲಕರ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸದ ಮಂಜೇಶ್ವರ ಪೆÇಲೀಸ್ ಅಧಿಕಾರಿಗಳ ವಿರುದ್ಧ ಬಿ.ಎಂ.ಎಸ್. ಮಂಜೇಶ್ವರ ವಲಯ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಪ್ರತಿಭಟನಾ ಸಭೆ ಬುಧವಾರ ನಡೆಯಿತು.
ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಉದ್ಘಾಟಿಸಿದರು. ಜೊತೆ ಕಾರ್ಯದರ್ಶಿ ದಿನೇಶ್, ಎಂ.ಟಿ.ಡಬ್ಲ್ಯು.ಎ. ಜಿಲ್ಲಾ ಕಾರ್ಯದರ್ಶಿ ಎಂ.ಉಮೇಶ್ ಉಪಸ್ಥಿತರಿದ್ದರು. ಕೆ.ಪಿ.ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರಮೇಶ್ ಬಿ.ಎಂ, ಉದಯ ಬೆಜ್ಜ, ನಾರಾಯಣ, ಅಶೋಕ ನೇತೃತ್ವ ನೀಡಿದರು. ಸಭೆಗೂ ಮೊದಲು ಹೊಸಂಗಡಿಯಲ್ಲಿ ಮೆರವಣಿಗೆ ನಡೆಯಿತು.


