ಮುಳ್ಳೇರಿಯ: ಮೊಬೈಲ್, ಟಿ.ವಿ, ಕಂಪ್ಯೂಟರ್‍ಗಳು ಅನಿವಾರ್ಯವಾಗಿರುವ ಇಂದಿನ ಕಾಲದಲ್ಲಿ ಶರೀರದ ಅವಿಭಾಜ್ಯ ಅಂಗವಾದ ಕಣ್ಣಿನ ಸಂರಕ್ಷಣೆಯ ಕುರಿತು ಯಾರೂ ಗಮನಹರಿಸುತ್ತಿಲ್ಲ. ಆಧುನಿಕ ತಂತ್ರಜ್ಞಾನ ಬೆಳೆದಂತೆ ಶಾರೀರಿಕ ಆರೋಗ್ಯವೂ ಕೆಡುತ್ತಿದೆ. ಆರೋಗ್ಯ ಸಂರಕ್ಷಣೆಯ ಕುರಿತು ಆಧುನಿಕ ಸಮೂಹ ಜಾಗೃತರಾಗಿ ಆರೋಗ್ಯವಂತ ಸಮಾಜದ ನಿರ್ಮಾಣ ಆಗಬೇಕು ಎಂದು ಮುಳಿಯಾರು ಗ್ರಾಮ ಪಂಚಾಯತಿ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ ಅವರು ಹೇಳಿದರು.
ಅವರು ಬೋವಿಕ್ಕಾನದ ಬಿ.ಎ.ಆರ್. ಹೈಯರ್ ಸೆಕೆಂಡರಿಯಲ್ಲಿ ಮುಳಿಯಾರು ಗ್ರಾಮ ಪಂಚಾಯತಿ ಮಲ್ಲ ವಾರ್ಡ್ ಅಭಿವೃದ್ಧಿ ಸಮಿತಿ, ಕಾನ್‍ಫೆಡ್ ಸೋಯಲ್ ಫಾರಂ, ಅಲ್‍ಸಲ್ಮಾ ಕಣ್ಣಿನ ಆಸ್ಪತ್ರೆ ಕಣ್ಣೂರು ಹಾಗೂ ಎನ್.ಎಸ್.ಎಸ್. ಘಟಕದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾ.ಪಂ. ಸದಸ್ಯ ಅನೀಸಾ ಮನ್ಸೂರ್ ಮಲ್ಲತ್ತ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಅಬ್ದುಲ್ ಸಾಜು ಮುಖಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ನೇತ್ರ ಸಂರಕ್ಷಣೆಯ ಮಹತ್ವವನ್ನು ಹೇಳಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾನ್‍ಫೆಡ್ ರಾಜ್ಯ ಕೋಶಾಧಿಕಾರಿ ಪಾರುಲ್ ಅಬೂಬಕ್ಕರ್ ಅವರು ಸೋಯಲ್ ಫಾರಂನ ಯೋಜನೆಯನ್ನು ವಿವರಿಸಿದರು.
ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪೆÇ್ರ.ಎ.ಶ್ರೀನಾಥ್., ಶಾಲಾ ಪ್ರಾಂಶುಪಾಲ ಮೆಜೋ ಜೋಸೆಫ್ ವಿ, ಐ ಟೆಕ್ನೀಶಿಯನ್ ಯಹಸಾನ್, ಕೆ.ಬಿ.ಮೊಹಮ್ಮದ್ ಕುಂಞÂ, ಹನೀಫ್ ಕಡಪ್ಪುರಂ, ಗ್ರಾ.ಪಂ. ಅಭಿವೃದ್ಧಿ ಸಮಿತಿಯ ಕೃಷ್ಣನ್ ಚೇಡಿಕ್ಕಾಲ್, ವೇಣುಕುಮಾರ್ ಅಮ್ಮಂಗೋಡ್, ಮಾಧವನ್ ನಂಬಿಯಾರ್, ಪೆÇನ್ನಪ್ಪನ್, ಪ್ರಕಾಶ್ ರಾವ್, ಶರೀಫ್ ಮಲ್ಲತ್ತ್, ಅಬ್ದುಲ್ಲ ಕುಂಞÂ್ಞ ಮುಂಡಪಳ್ಳಂ, ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಬೋವಿಕ್ಕಾನದ ಉಪಾಧ್ಯಕ್ಷ ಅಬ್ದುಲ್ ಖಾದರ್, ಹೈಯರ್ ಸೆಕೆಂಡರಿ ಅಧ್ಯಾಪಕ ಕರೀಂ ಕೋಯಕ್ಕಿಲ್, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಪ್ರೀತಮ್ ಎ.ಕೆ., ಮುಳಿಯಾರ್ ಸಮುದಾಯ ಆರೋಗ್ಯ ಕೇಂದ್ರದ ಪಾಲಿಯೇಟಿವ್ ಕೇರ್ ದಾದಿ ಪ್ರಿಯಾ ಕುಮಾರಿ ಉಪಸ್ಥಿತರಿದ್ದು ಶುಭಾಶಂಸನೆಗೈದರು.

