ಕಾಸರಗೋಡು: ಕೊರೊನಾ ವೈರಸ್ ಸೋಂಕಿನಿಂದ ಗುಣ ಪಡಿಸುವಲ್ಲಿ ದಾಖಲೆ ಸೃಷ್ಟಿಸಿದ ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಮತ್ತೆ 19 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಎ.20 ರಂದು ಹೊಸ ಪ್ರಕರಣಗಳು ದಾಖಲಾಗಿಲ್ಲ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 169 ಮಂದಿ ಸೋಂಕು ಬಾ„ಸಿದ್ದು, 142 ಮಂದಿ ಗುಣಮುಖರಾಗಿದ್ದಾರೆ. 27 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 15 ಮಂದಿ ಕಾಸರಗೋಡು ಜನರಲ್ ಆಸ್ಪತ್ರೆಯಿಂದ, ಇಬ್ಬರು ಪರಿಯಾರಂ ಮೆಡಿಕಲ್ ಕಾಲೇಜಿನಿಂದ, ಇಬ್ಬರು ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಗೊಂಡವರು. ಜಿಲ್ಲೆಯಲ್ಲಿ 4754 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 4700 ಮಂದಿ, ಆಸ್ಪತ್ರೆಗಳಲ್ಲಿ 54 ಮಂದಿ ನಿಗಾದಲ್ಲಿದ್ದಾರೆ. ನಿಗಾದಲ್ಲಿದ್ದ 440 ಮಂದಿ ನಿಗಾ ಕಾಲಾವ„ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ 3150 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 2495 ಮಂದಿಯ ತಪಾಸಣೆ ನೆಗೆಟಿವ್ ಆಗಿದೆ. 369 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕೇರಳ ರಾಜ್ಯದಲ್ಲಿ ಆರು ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಸೋಮವಾರ ಒಟ್ಟು ಆರು ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಈ ಆರು ಮಂದಿ ಕಣ್ಣೂರು ಜಿಲ್ಲೆಯವರು. ಇವರಲ್ಲಿ ಐವರು ವಿದೇಶದಿಂದ ಬಂದವರು ಹಾಗು ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ರಾಜ್ಯದಲ್ಲಿ 21 ಮಂದಿ ಗುಣಮುಖರಾಗಿದ್ದು, ಅವರಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 19 ಮಂದಿ ಮತ್ತು ಆಲಪ್ಪುಳ ಜಿಲ್ಲೆಯಲ್ಲಿ ಇಬ್ಬರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈ ವರೆಗೆ ಒಟ್ಟು 408 ಮಂದಿಗೆ ಕೊರೊನಾ ವೈರಸ್ ಸೋಂಕು ಬಾ„ಸಿದೆ. ರಾಜ್ಯದಲ್ಲಿ ಒಟ್ಟು 292 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ. 114 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 46323 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 45925 ಮಂದಿ ಮನೆಗಳಲ್ಲೂ, 398 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಸೋಮವಾರ ವಿವಿಧ ಆಸ್ಪತ್ರೆಗಳಿಗೆ 62 ಮಂದಿಯನ್ನು ದಾಖಲಿಸಲಾಗಿದೆ. ಇದು ವರೆಗೆ ರಾಜ್ಯದಲ್ಲಿ 19756 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ ಲಭ್ಯ 19074 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಆಸ್ಪತ್ರೆಗಳಲ್ಲಿ ಕ್ವಾರಂಟೈನ್‍ನಲ್ಲಿರುವ ಸರ್ವರನ್ನೂ ಪರೀಕ್ಷೆಗೊಳಪಡಿಸಲಾಗುವುದು. ಈ ಪ್ರಕ್ರಿಯೆ 2-3 ದಿನಗಳಲ್ಲಿ ಪೂರ್ತಿಯಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
52 ಕೇಸು ದಾಖಲು :
ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 52 ಕೇಸುಗಳನ್ನು ದಾಖಲಿಸಲಾಗಿದೆ. 60 ಮಂದಿಯನ್ನು ಬಂಧಿಸಲಾಗಿದ್ದು, 19 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು, ಕುಂಬಳೆ 1, ಕಾಸರಗೋಡು 8, ವಿದ್ಯಾನಗರ 5, ಬೇಡಗಂ 2, ಮೇಲ್ಪರಂಬ 10, ಬೇಕಲ 3, ನೀಲೇಶ್ವರ 1, ಚೀಮೇನಿ 1, ಚಂದೇರ 6, ವೆಳ್ಳರಿಕುಂಡ್ 2, ಚಿತ್ತಾರಿಕಲ್ 4, ರಾಜಪುರಂ 5, ಹೊಸದುರ್ಗ 2 ಕೇಸುಗಳನ್ನು ದಾಖಲಿಸಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 1235 ಕೇಸುಗಳನ್ನು ದಾಖಲಿಸಲಾಗಿದೆ. 1679 ಮಂದಿಯನ್ನು ಬಂಧಿಸಲಾಗಿದ್ದು, 562 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.


