HEALTH TIPS

ಕೊರೊನಾ : ಕೇರಳದಲ್ಲಿ ಮತ್ತೆ 11 ಮಂದಿಗೆ ಸೋಂಕು-ಕಾಸರಗೋಡು ಜಿಲ್ಲೆಯಲ್ಲಿ ಹೊಸ ಪ್ರಕರಣ ಇಲ್ಲ

   
        ಕಾಸರಗೋಡು: ಕೇರಳ ರಾಜ್ಯದಲ್ಲಿ ಶನಿವಾರ ಮತ್ತೆ 11 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇದೇ ವೇಳೆ ನಾಲ್ವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣ ದಾಖಲಾಗಿಲ್ಲ.
      ತೃಶ್ಶೂರು ಜಿಲ್ಲೆಯಲ್ಲಿ ನಾಲ್ವರಿಗೆ, ಕಲ್ಲಿಕೋಟೆ ಜಿಲ್ಲೆಯಲ್ಲಿ ಮೂವರಿಗೆ, ಪಾಲ್ಘಾಟ್ ಹಾಗು ಮಲಪ್ಪುರಂ ತಲಾ ಇಬ್ಬರಿಗೆ ರೋಗ ಬಾಧಿಸಿದೆ. ಈ 11 ಮಂದಿಯೂ ಕೇರಳದ ಹೊರಗಿನಿಂದ ಬಂದವರು. 7 ಮಂದಿ ವಿದೇಶದಿಂದ ಬಂದವರು. ತಲಾ ಇಬ್ಬರು ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
      ಕಣ್ಣೂರು ಮತ್ತು ವಯನಾಡು ಜಿಲ್ಲೆಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಲಾ ಇಬ್ಬರು ರೋಗ ಮುಕ್ತರಾಗಿದ್ದಾರೆ. ಕೇರಳದಲ್ಲಿ ಈ ವರೆಗೆ 497 ಮಂದಿ ರೋಗ ಮುಕ್ತರಾಗಿದ್ದು, ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ 87 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
      ರಾಜ್ಯದಲ್ಲಿ ಒಟ್ಟು 56981 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 56,362 ಮಂದಿ ಮನೆಗಳಲ್ಲೂ, 619 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಶನಿವಾರ ಶಂಕಿತ 182 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ತನಕ 43669 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 41814 ನೆಗೆಟಿವ್ ಆಗಿದೆ.
      ಶನಿವಾರ 6 ಪ್ರದೇಶಗಳನ್ನು ಹಾಟ್‍ಸ್ಪಾಟ್ ಯಾದಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ನೀಲೇಶ್ವರ, ಕಾಸರಗೋಡು ನಗರಸಭೆ, ಕಳ್ಳಾರು, ಇಡುಕ್ಕಿ ಜಿಲ್ಲೆಯ ವಂಡನ್‍ಮೇಡ್, ಕರುಣಾಪುರಂ, ವಯನಾಡು ಜಿಲ್ಲೆಯಲ್ಲಿ ತವಿಂಞõÁಲ್ ಪ್ರದೇಶವನ್ನು ಹಾಟ್‍ಸ್ಪಾಟ್‍ನಲ್ಲಿ ಸೇರ್ಪಡೆಗೊಳಿಸಲಾಗಿದೆ.
           ಕಾಸರಗೋಡು ಜಿಲ್ಲೆಯಲ್ಲಿ 1817 ಮಂದಿ ನಿಗಾವಣೆಯಲ್ಲಿ :
      ಕಾಸರಗೊಡು ಜಿಲ್ಲೆಯಲ್ಲಿ ಒಟ್ಟು 1817 ಮಂದಿ ನಿಗಾದಲ್ಲಿದ್ದಾರೆ. 1555 ಮಂದಿ ಮನೆಗಳಲ್ಲಿ, 262 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶನಿವಾರ ನೂತನವಾಗಿ 61 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 5510 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4866 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
70 ಕ್ಕೂ ಹೆಚ್ಚು ಮಂದಿಯ ಸಂಪರ್ಕ : ಕೊರೊನಾ ದೃಡೀಕರಿಸಿದ ಪೈವಳಿಕೆಯ ಸಿ.ಪಿ.ಎಂ. ಪ್ರಾದೇಶಿಕ ಮುಖಂಡ ಮತ್ತು  ಪಂಚಾಯತ್ ಸದಸ್ಯೆ ಸುಮಾರು 70 ಕ್ಕೂ ಹೆಚ್ಚು ಮಂದಿಯನ್ನು ಸಂಪರ್ಕಿಸಿದ್ದಾಗಿ ಕೋವಿಡ್ ನಿಗಾವಣೆ ಸೆಲ್ ಅಂದಾಜಿಸಿದೆ.
      ಈ ವ್ಯಕ್ತಿ ಕಾಂಞಂಗಾಡ್‍ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಮೂರು ಬಾರಿ ಹೋಗಿದ್ದಲ್ಲದೆ ಪೈವಳಿಕೆಯಲ್ಲಿ ಸಾವಿನ ಮನೆಗೂ ಹೋಗಿದ್ದರು. ಇವರ ಸಂಪರ್ಕದಲ್ಲಿದ್ದವರನ್ನು ಇದೀಗ ನಿಗಾವಣೆಯಲ್ಲಿರಿಸಲಾಗಿದೆ. ಅವರ ಪತ್ನಿಯಾದ ಪಂಚಾಯತ್ ಸದಸ್ಯೆಯ ಸಂಪರ್ಕ ಯಾದಿಯಲ್ಲಿ ಜನಪ್ರತಿನಿ„ಗಳು ಸಹಿತ 20 ಕ್ಕೂ ಹೆಚ್ಚು ಜನರಿದ್ದಾರೆ. ಅವರೂ ನಿಗಾವಣೆಯಲ್ಲಿದ್ದಾರೆ. ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಸಂದರ್ಶಿಸಿದ ಕಾರಣದಿಂದ ಇಬ್ಬರು ಡಾಕ್ಟರ್‍ಗಳ ಸಹಿತ 20 ಮಂದಿ ಕ್ವಾರೆಂಟೈನ್‍ನಲ್ಲಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆಗೆ ಕೋವಿಡ್ ಬಾ„ಸಿದ್ದರಿಂದ ಇಲ್ಲಿನ 17 ಮಂದಿ ಕ್ವಾರೆಂಟೈನ್‍ನಲ್ಲಿದ್ದಾರೆ.
     ರೋಗ ಸಾಧ್ಯತೆಯ ವ್ಯಕ್ತಿಯೊಂದಿಗೆ ಸಂಪರ್ಕವಾಗಿದ್ದರೂ ಸಾಮೂಹಿಕ ಭೀತಿಗೆ ಕಾರಣವಾಗುವ ರೀತಿಯಲಿ ನಡೆದುಕೊಂಡ ಹಿನ್ನೆಲೆಯಲ್ಲಿ ಸಿಪಿಎಂ ಪ್ರಾದೇಶಿಕ ಮುಖಂಡನ ವಿರುದ್ಧ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries