ಕಾಸರಗೋಡು: ಕೇರಳ ರಾಜ್ಯದಲ್ಲಿ ಶುಕ್ರವಾರ ಮತ್ತೆ 16 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ವಯನಾಡು-5, ಮಲಪ್ಪುರಂ-4, ಕಲ್ಲಿಕೋಟೆ-2, ಆಲಪ್ಪುಳ-2, ಕಾಸರಗೋಡು-1, ಪಾಲ್ಘಾಟ್-1, ಕೊಲ್ಲಂ-1 ಎಂಬಂತೆ ರೋಗ ಬಾಧಿಸಿದೆ. ಇವರಲ್ಲಿ 7 ಮಂದಿ ವಿದೇಶದಿಂದ ಬಂದವರು. ತಮಿಳುನಾಡಿನಿಂದ ಬಂದ ನಾಲ್ವರಿಗೆ, ಮುಂಬೈಯಿಂದ ಬಂದ ಇಬ್ಬರು, ಸಂಪರ್ಕದಿಂದ ಮೂವರಿಗೆ ರೋಗ ಬಾಧಿಸಿದೆ. ಶುಕ್ರವಾರ ಯಾರೂ ರೋಗ ಮುಕ್ತಿ ಪಡೆದಿಲ್ಲ. ರಾಜ್ಯದಲ್ಲಿ ಒಟ್ಟು 576 ಮಂದಿಗೆ ರೋಗ ಬಾ„ಸಿದ್ದು, ಪ್ರಸ್ತುತ 80 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 48825 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 48287 ಮಂದಿ ಮನೆಗಳಲ್ಲೂ, 538 ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಸಂಪರ್ಕದಿಂದ ರೋಗ ವ್ಯಾಪನ ಸಾಧ್ಯತೆ ಅ„ಕವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ರಾಜ್ಯದಲ್ಲಿ ಶಂಕಿತ 122 ಮಂದಿಯನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ವಾರೆಂಟೈನ್ ಉಲ್ಲಂಘಿಸುವವರನ್ನು ಪತ್ತೆಹಚ್ಚಲು ಮೋಟಾರ್ ಸೈಕಲ್ ಬ್ರಿಗೇಡ್ ನೇಮಿಸಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಇದರೊದಿಗೆ ವಿವಿಧ ಆಸ್ಪತ್ರೆಗಳಲ್ಲಿ 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುವೈಟ್‍ನಿಂದ ಕರಿಪೂರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ 39 ವರ್ಷ ಪ್ರಾಯದ ಅಜಾನೂರು ಪಂಚಾಯತ್‍ನ ಯುವಕನಿಗೆ ಕೊರೊನಾ ಬಾಧಿಸಿದೆ.
ಜಿಲ್ಲೆಯಲ್ಲಿ ಒಟ್ಟು 1662 ಮಂದಿ ನಿಗಾದಲ್ಲಿದ್ದಾರೆ. 1451 ಮಂದಿ ಮನೆಗಳಲ್ಲಿ, 211 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಶುಕ್ರವಾರ 16 ಮಂದಿಯನ್ನು ನೂತನವಾಗಿ ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 5312 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4817 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಹಾಟ್ ಸ್ಪಾಟ್ : ಮತ್ತೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕುಂಬಳೆ, ಪೈವಳಿಕೆ ಮತ್ತು ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾಟ್ ಸ್ಪಾಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಹಾಗು ಅನಗತ್ಯವಾಗಿ ಮನೆಯಿಂದ ಹೊರಗೆ ಬರುವವರನ್ನು ನಿಯಂತ್ರಿಸಲು ಪೆÇಲೀಸರು ತೀರ್ಮಾನಿಸಿದ್ದಾರೆ.
23 ಕೇಸು ದಾಖಲು : ಲಾಕ್ ಡೌನ್ ಉಲ್ಲಂಘನೆ ಸಂಬಂಧವಾಗಿ ಜಿಲ್ಲೆಯಲ್ಲಿ 23 ಕೇಸುಗಳನ್ನು ದಾಖಲಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ 2, ಕುಂಬಳೆ-3, ವಿದ್ಯಾನಗರ-4, ಕಾಸರಗೋಡು-2, ಬದಿಯಡ್ಕ-1, ಮೇಲ್ಪರಂಬ-2, ಬೇಕಲ-1, ಹೊಸದುರ್ಗ-1, ನೀಲೇಶ್ವರ-1, ಚಿಟ್ಟಾರಿಕ್ಕಲ್-1, ರಾಜಪುರಂ-3 ಕೇಸುಗಳನ್ನು ದಾಖಲಿಸಲಾಗಿದೆ. ವಿವಿಧ ಕೇಸುಗಳಿಗೆ ಸಂಬಂ„ಸಿ 28 ಮಂದಿಯನ್ನು ಬಂಧಿಸಲಾಗಿದೆ. 11 ವಾಹನಗಳನ್ನು ವಶಪಡಿಸಲಾಗಿದೆ. ಜಿಲ್ಲೆಯಲ್ಲಿ ಈ ತನಕ 2177 ಕೇಸುಗಳನ್ನು ದಾಖಲಿಸಲಾಗಿದೆ. ವಿವಿಧ ಕೇಸುಗಳಲ್ಲಾಗಿ 2810 ಮಂದಿಯನ್ನು ಬಂಧಿಸಲಾಗಿದ್ದು, 899 ವಾಹನಗಳನ್ನು ವಶಪಡಿಸಲಾಗಿದೆ.
ಪೈವಳಿಕೆ ಪಂಚಾಯತ್ ಕಚೇರಿ ಮುಚ್ಚುಗಡೆ : ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯೆಗೆ ಕೊರೊನಾ ವೈರಸ್ ಸೋಂಕು ಬಾ„ಸಿದ ಹಿನ್ನೆಲೆಯಲ್ಲಿ ಪಂಚಾಯತ್ ಕಚೇರಿಯನ್ನು ಮುಚ್ಚುಗಡೆ ಮಾಡಲಾಗಿದೆ. ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಮಾಜಿ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಕಚೇರಿಯ ವಾಹನ ಚಾಲಕ ಮೊದಲಾದವರು ನಿಗಾವಣೆಯಲ್ಲಿದ್ದಾರೆ. ಮೇ 14 ರಂದು ಪ್ರಾದೇಶಿಕ ನೇತಾರ, ಪತ್ನಿ, ಇಬ್ಬರು ಮಕ್ಕಳಿಗೆ ಕೊರೊನಾ ವೈರಸ್ ಸೋಂಕು ಬಾ„ಸಿತ್ತು. ಶುಕ್ರವಾರ ಪಂಚಾಯತ್ ಕಚೇರಿ ತೆರೆಯಲಿಲ್ಲ. ಮೇ 7 ರಂದು ಪಂಚಾಯತ್ ಕಚೇರಿಯಲ್ಲಿ ನಡೆದ ಮುಖ್ಯಮಂತ್ರಿಗಳ ವೀಡಿಯೋ ಕಾನರೆನ್ಸ್‍ನಲ್ಲಿ ರೋಗ ಬಾ„ಸಿದ ಸದಸ್ಯರೂ ಭಾಗವಹಿಸಿದ್ದರು. ಅಂದು ಸಭೆಯಲ್ಲಿದ್ದ ಎಲ್ಲಾ ಸದಸ್ಯರನ್ನು ನಿಗಾವಣೆಯಲ್ಲಿರಿಸಲಾಗಿದೆ.
ಟಾಟಾ ಕೋವಿಡ್ ಆಸ್ಪತ್ರೆ ಪ್ರಗತಿಯಲ್ಲಿ : ಟಾಟಾ ಕೋವಿಡ್ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯವುಳ್ಳ ಫ್ರಿಫಬ್ರಿಕೇಟೆಡ್ ಯೂನಿಟ್‍ನ ಪ್ರಥಮ ಕಂಟೈನರ್ ತಲುಪಿತು.
ಆಸ್ಪತ್ರೆ ನಿರ್ಮಾಣಗೊಳ್ಳುತ್ತಿರುವ ಚಟ್ಟಂಚಾಲ್ ಪುದಿಯವಳಪ್ಪಿಗೆ ತಲುಪಿದೆ. ಟಾಟಾ ಸ್ಟೀಲ್ ಪ್ಲಾಂಟ್‍ನಲ್ಲಿ ನಿರ್ಮಾಣಗೊಳ್ಳುತ್ತಿರುವ ಯೂನಿಟ್‍ಗಳನ್ನು ಕಂಟೈನರ್‍ಗಳ ಮೂಲಕ ತಲುಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಫರಿದಾಬಾದ್, ಹೌರಾ, ಹುಗ್ಲಿ ಮೊದಲಾದೆಡೆಗಳಲ್ಲಿರುವ ಪ್ಲಾಂಟ್‍ಗಳಿಂದ ಯೂನಿಟ್‍ಗಳು ಬರಲಿವೆ. 58 ಯೂನಿಟ್‍ಗಳನ್ನು ಸ್ಥಾಪಿಸಲು ಅಗತ್ಯವಾದ ತಯಾರಿ ಪೂರ್ಣಗೊಂಡಿದೆ. 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಆಸ್ಪತ್ರೆಯಲ್ಲಿ
124 ಯೂನಿಟ್‍ಗಳನ್ನು ಜೋಡಿಸಲಾಗುವುದು. ಮೂರು ಹಂತಗಳಲ್ಲಿ ಈ ಕಾರ್ಯ ನಡೆಯಲಿದೆ. ಇವುಗಳ ಪೈಕಿ 24 ಐಸೋಲೇಶನ್ ಕೇಂದ್ರವಾಗಿದೆ.