ತಿರುವನಂತಪುರ: ಕೊರೊನಾ ಲಾಕ್ ಡೌನ್ ಕಾರಣ ಸಂಚಾರ ಹಿಂತೆಗೆದುಕೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ಗಳ ಪೈಕಿ ಇಂದಿನಿಂದ 1850 ಕೆ ಎಸ್ ಆರ್ ಟಿ ಸಿ ಬಸ್‍ಗಳು ರಸ್ತೆಗಿಳಿಯಲಿವೆ ಎಂದು ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ನಿನ್ನೆ ಮಾಹಿತಿ ನೀಡಿರುವರು.
ನಿಯಮಿತ ಬಸ್ಸುಗಳು ಮಾತ್ರ ಕಾರ್ಯನಿರ್ವಹಿಸಲಿವೆ. ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಸೇವೆ ಲಭ್ಯವಿದೆ. ಪ್ರಯಾಣಿಕರ ಅಗತ್ಯತೆಗಳಿಗೆ ಅನುಗುಣವಾಗಿ ಮಾತ್ರ ಈ ಸೇವೆಯನ್ನು ನಿರ್ವಹಿಸಲಾಗುವುದು. ಬಸ್‍ನ ಹಿಂದಿನ ಬಾಗಿಲಿನ ಮೂಲಕ ಮಾತ್ರ ಪ್ರಯಾಣಿಕರಿಗೆ ಬಸ್ಸಿನ ಒಳಗೆ ತೆರಳಲು ಅವಕಾಶ ನೀಡಲಾಗುವುದು. ಪ್ರಯಾಣಿಕರು ಮುಂಭಾಗದ ಬಾಗಿಲಿನ ಮೂಲಕ ಹಿಂತೆರಳಬೇಕಾಗಿದೆ ಎಂದು ಅವರು ಹೇಳಿದರು.
ಪ್ರಯಾಣಿಕರು ಸರ್ಕಾರ ಮತ್ತು ಆರೋಗ್ಯ ಕಾರ್ಯಕರ್ತರು ನೀಡುವ ಸೂಚನೆಗಳನ್ನು ಪಾಲಿಸಬೇಕು. ಮುಖವಾಡ ಧರಿಸಿ ಮಾತ್ರ ಪ್ರಯಾಣ ನಡೆಸಬೇಕು. ಸಾಮೂಹಿಕ ಅಂತರ ಪಾಲನೆ ಮತ್ತು ಸ್ಯಾನಿಟೈಸರ್ ಬಳಕೆ ಖಡ್ಡಾಯ ಇರಲಿದೆ ಎಂದು ಸಚಿವರು ಮಾಹಿತಿ ನೀಡಿರುವರು.
ಮೊದಲ ಹಂತದಲ್ಲಿ ಕಡಿಮೆ ಸೇವೆಗಳು ಇರುತ್ತವೆ ಎಂದು ಸರ್ಕಾರ ಸೂಚಿಸಿದೆ. ತಿರುವನಂತಪುರಂ (499), ಕೊಲ್ಲಂ (208), ಪಥನಮತ್ತಟ್ಟ (93), ಆಲಪ್ಪುಳ (122), ಕೊಟ್ಟಾಯಂ (102), ಇಡುಕಿ (66), ಎರ್ನಾಕುಲಂ (206), ತ್ರಿಶೂರ್ (92), ಪಾಲಕ್ಕಾಡ್ (65) ಮತ್ತು ಮಲಪ್ಪುರಂ (49). ಕೋ ಏozhiಞoಜe ?ಕೋಡ್ (83), ವಯನಾಡ್ (97) ಮತ್ತು ಕಾಸರ್‍ಗೋಡು (68) ಬಸ್ ಗಳು ಮಾತ್ರ ಸಂಚಾರ ನಡೆಸಲಿವೆ.
ಖಾಸಗಿ ಬಸ್ಸುಗಳು ಸಂಚಾರ ನಡೆಸೋಲ್ಲ!
ಖಾಸಗೀ ಬಸ್ ಗಳು ಸರ್ಕಾರದೊಂದಿಗೆ ಇರಿಸಿರುವ ಬೇಡಿಕೆಗಳನ್ನು ಪೂರೈಸದ ಹೊರತು ರಸ್ತೆಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದಿರುವುದರಿಂದ ಖಾಸಗೀ ಬಸ್ ಸಂಚಾರ ಇನ್ನೂ ಆರಂಭಗೊಂಡಿಲ್ಲ. ಇಂಧನ ಬೆಲೆ ಕಡಿತಗೊಳಿಸಬೇಕು ಮತ್ತು ಒಬ್ಬ ಪ್ರಯಾಣಿಕನ ಕನಿಷ್ಠ ಟಿಕೆಟ್ ದರ ಹೆಚ್ಚಿಸಬೇಕೆಂದು ಬಸ್ ಮಾಲಕರ ಸಂಘ ಪಟ್ಟುಹಿಡಿದಿದೆ. ಪರಿಸ್ಥಿತಿಯನ್ನು ಅರಿತುಕೊಂಡ ಬಳಿಕ ಖಾಸಗಿ ಬಸ್ ಮಾಲೀಕರ ಬೇಡಿಕೆ ಈಡೇರಿಸಲುಚಿಂತಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿರುವರು. ಕೋವಿಡ್ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.


