ವಾಷಿಂಗ್ಟನ್: ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವಲ್ಲಿ ದೇಶಗಳು ಶ್ರಮಿಸುತ್ತಿವೆ. ವಿವಿಧ ದೇಶಗಳು ಈ ವೈರಾಣು ವಿರುದ್ಧ ಹೋರಾಡುತ್ತಿದೆ. ಪರಿಣಾಮ ವಿಶ್ವದಲ್ಲಿ ಕೋವಿಡ್-19 ನಿಂದ ಸಾವನ್ನಪ್ಪಿದವರ ಸಂಖ್ಯೆ 2.80 ಲಕ್ಷ ಗಡಿ ದಾಟಿದೆ.
ವಿಶ್ವದಲ್ಲಿ ಕೊರೊನಾಗೆ ಚಿಕಿತ್ಸೆ ಫಲಿಸದೆ 2,82,694 ಜನರು ಸಾವನ್ನಪ್ಪಿದ್ದು, 41,01,060 ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಸೋಂಕಿನಿಂದ ಹೆಚ್ಚು ಬಾಧಿತ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 79,525 ಜನರು ಜೀವ ಕಳೆದುಕೊಂಡಿದ್ದಾರೆ. ಉಳಿದಂತೆ ಇಂಗ್ಲೆಂಡ್ 31,930 ಹಾಗೂ ಇಟಲಿಯಲ್ಲಿ 30,560 ಜನರು ಚಿಕಿತ್ಸೆ ಫಲಕಾರಿಯಾಗಿದೆ ಅಸುನೀಗಿದ್ದಾರೆ.


