ಕಾಸರಗೋಡು: ಜಿಲ್ಲೆಯಲ್ಲಿ ಸತತ ಹತ್ತನೇ ದಿನದ ಬಳಿಕ ಮತ್ತೆ ನಾಲ್ಕು ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಭಾನುವಾರ ಕಾಸರಗೋಡು ಜಿಲ್ಲೆಯಲ್ಲಿ ಎಲ್ಲಾ ಕೊರೊನಾ ರೋಗಿಗಳು ಗುಣಮುಖರಾಗಿದ್ದು ಸಮಾಧಾನದ ನಿಟ್ಟುಸಿರು ಬಿಡಲಾಗಿತ್ತು. ಇದೀಗ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ಬಾ„ಸಿರುವುದರಿಂದ ಆತಂಕಕ್ಕೆ ಕಾರಣವಾಗಿದೆ.
ಈ ನಾಲ್ವರಲ್ಲಿ ಇಬ್ಬರು ಕುಂಬಳೆ ನಿವಾಸಿಗಳು(41 ಮತ್ತ 49 ವರ್ಷ), 61 ವರ್ಷದ ಮಂಗಲ್ಪಾಡಿ ನಿವಾಸಿ ಮತ್ತು 51 ವರ್ಷದ ಪೈವಳಿಕೆ ನಿವಾಸಿಗಳಾಗಿದ್ದಾರೆ. ಎಲ್ಲರು ಪುರುಷರು. ಕುಂಬಳೆ ಮತ್ತು ಮಂಗಲ್ಪಾಡಿ ನಿವಾಸಿಗಳು ಜೊತೆಗೆ ಊರಿಗೆ ಬಂದಿದ್ದರು. ಪೈವಳಿಕೆ ನಿವಾಸಿ ಮೇ 4ರಂದು, ಉಳಿದವರು ಮೇ 8 ರಂದು ಊರಿಗೆ ಬಂದಿದ್ದರು. ಎಲ್ಲರನ್ನೂ ಕ್ವಾರೆಂಟೈನ್‍ನಲ್ಲಿರಿಸಲಾಗಿತ್ತು.
ಜಿಲ್ಲೆಯಲ್ಲಿ 1025 ಮಂದಿ ಮನೆಗಳಲ್ಲಿ, 172 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಸೋಮವಾರ ನೂತನವಾಗಿ 22 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 4 ಮಂದಿ ತಮ್ಮ ನಿಗಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ 5122 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಲಭ್ಯ 4505 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಕೇರಳದಲ್ಲಿ 7 ಮಂದಿಗೆ ಕೊರೊನಾ :
ಕೇರಳದಲ್ಲಿ ಸೋಮವಾರ 7 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಕಾಸರಗೋಡು -4, ಮಲಪ್ಪುರಂ, ಪಾಲ್ಘಾಟ್ ಮತ್ತು ವಯನಾಡು ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ರೋಗ ಬಾ„ಸಿದೆ. ಕಾಸರಗೋಡಿನಲ್ಲಿ ಮಹಾರಾಷ್ಟ್ರದಿಂದ ಬಂದ ನಾಲ್ವರಿಗೆ ರೋಗ ದೃಢೀಕರಿಸಲಾಗಿದೆ. ಭಾನುವಾರ ಕಾಸರಗೋಡಿನಲ್ಲಿ ಎಲ್ಲಾ 179 ಮಂದಿ ಗುಣಮುಖರಾಗಿ ಕೊರೊನಾ ಮುಕ್ತ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಸೋಮವಾರ ಮತ್ತೆ ನಾಲ್ವರಿಗೆ ರೋಗ ಖಾತರಿಯಾಗಿರುವುದರಿಂದ ಮತ್ತೆ ಆತಂಕಕ್ಕೆ ಕಾರಣವಾಗಿದೆ. ಪಾಲ್ಘಾಟ್ ಜಿಲ್ಲೆಯಲ್ಲಿರುವ ವ್ಯಕ್ತಿ ಚೈನ್ನೈಯಿಂದ ಬಂದವರು. ಮಲಪ್ಪುರದ ವ್ಯಕ್ತಿ ಕುವೈಟ್‍ನಿಂದ ಬಂದವರು. ವಯನಾಡು ಜಿಲ್ಲೆಯ ವ್ಯಕ್ತಿಗೆ ಸಂಪರ್ಕದಿಂದ ರೋಗ ಬಾ„ಸಿದೆ. ರಾಜ್ಯದಲ್ಲಿ ಈ ವರೆಗೆ 489 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಗಳಲ್ಲಿ 27 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರವಿವಾರದ ವರಗೆ 1307 ಮಂದಿ ವಿದೇಶದಿಂದ ಕೇರಳಕ್ಕೆ ಬಂದಿದ್ದಾರೆ. ಅವರಲ್ಲಿ 650 ಮಂದಿ ಮನೆಗಳಲ್ಲೂ, 641 ಮಂದಿ ಕೋವಿಡ್ ಕೇರ್ ಕೇಂದ್ರಗಳಲ್ಲೂ, 16 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಾಗಿ 27986 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 27545 ಮಂದಿ ಮನೆಗಳಲ್ಲೂ, 441 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಸೋಮವಾರ ಶಂಕಿತ 157 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವರೆಗೆ 37858 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 37098 ನೆಗೆಟಿವ್ ಆಗಿದೆ.
3 ಕೇಸು ದಾಖಲು : ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 13 ಕೇಸುಗಳನ್ನು ದಾಖಲಿಸಲಾಗಿದೆ. 27 ಮಂದಿಯನ್ನು ಬಂಧಿಸಲಾಗಿದೆ. 7 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸುಗಳು, ವಿದ್ಯಾನಗರದಲ್ಲಿ 1, ಕಾಸರಗೋಡು 1, ಬೇಡಗಂ 3, ನೀಲೇಶ್ವರ 1, ಚಂದೇರ 3, ಚೀಮೇನಿ 1, ವೆಳ್ಳರಿಕುಂಡ್ 1 ಕೇಸುಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಈ ವರೆಗೆ 2108 ಕೇಸುಗಳು ದಾಖಲಾಗಿವೆ. 2739 ಮಂದಿಯನ್ನು ಬಂಧಿಸಲಾಗಿದೆ. 877 ವಾಹನಗಳನ್ನು ವಶಪಡಿಸಲಾಗಿದೆ.


