HEALTH TIPS

ಕೇರಳಕ್ಕೆ ಚೆನ್ನೈ ನಂಜು: ವಯನಾಡು, ಕಾಸರಗೋಡಿನಲ್ಲಿ ಕೊವಿಡ್-19 ಪ್ರಕರಣ ಹೆಚ್ಚಳ

   
            ಕಲ್ಪಟ್ಟ: ಕೇರಳಾದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎನ್ನುವಾಗಲೇ ವಯನಾಡು ಮತ್ತು ಕಾಸರಗೋಡಿನಲ್ಲಿ ಮತ್ತೆ ಕೊವಿಡ್ 19 ಪ್ರಕರಣಗಳು ಹೆಚ್ಚುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
        ಇತ್ತೀಚಿಗೆ ಚೆನ್ನೈನ ಕೊರೋನಾ ಹಾಟ್ ಸ್ಪಾಟ್ ಕೊಯಂಬೆಡು ಮಾರುಕಟ್ಟೆಯಿಂದ ಬಂದ ಲಾರಿ ಚಾಲಕನಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಅಧಿಕಾರಿಗಳಿಗೆ ಚಾಲಕನ ಸಂಪರ್ಕಿತರನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. 52 ವರ್ಷದ ಲಾರಿ ಚಾಲಕನ ಸಂಬಂಧಿಗಳು ಸೇರಿದಂತೆ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಮಂದಿಗೆ ಈಗಾಗಲೇ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಶುಕ್ರವಾರ ವಯನಾಡಿನಲ್ಲಿ ಮತ್ತೆ ಐದು ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
       ಕೇರಳದ ಮತ್ತೊಂದು ಜಿಲ್ಲೆ ಕಾಸರಗೋಡಿನಲ್ಲಿ ಹಲವು ದಿನಗಳ ನಂತರ ಮೊನ್ನೆ ಮತ್ತೆ 13 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇದರ ಹಿಂದೆ ಮಹಾರಾಷ್ಟ್ರದ ಸಂಪರ್ಕ ವ್ಯಕ್ತಿಗಳೂ ಒಳಗೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries