HEALTH TIPS

ಗ್ರೀನ್ ಝೋನ್ ಎಂದು ಘೋಷಿಸಲ್ಪಟ್ಟಿದ್ದ ಗೋವಾ ರಾಜ್ಯದಲ್ಲಿ 7 ಹೊಸ ಕೊರೋನಾ ಸೋಂಕು ಪ್ರಕರಣ!

     
       ಪಣಜಿ: ಗೋವಾ ರಾಜ್ಯದಲ್ಲಿ 7 ಮಂದಿ ಕೊರೋನಾ ಶಂಕಿತರ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.
      ಮೇ 1ರಿಂದ ಯಾವುದೇ ಹೊಸ ಕೊರೋನಾ ಪ್ರಕರಣಗಳು ವರದಿಯಾಗದ್ದರಿಂದ ಗೋವಾ ರಾಜ್ಯವನ್ನು ಈ ಹಿಂದೆ ಕೇಂದ್ರ ಸರ್ಕಾರ ಹಸಿರು ವಲಯ ಎಂದು ಗುರುತಿಸಿತ್ತು. ಆದರೆ ಗೋವಾ ಮೆಡಿಕಲ್ ಕಾಲೇಜಿನಲ್ಲಿ 7 ಮಂದಿ ಶಂಕಿತರ ಪರೀಕ್ಷೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ ಎಂದು ರಾಣೆ ತಿಳಿಸಿದ್ದಾರೆ. ಕೋವಿಡ್-19 ಚಿಕಿತ್ಸೆಗೆ ಮೀಸಲಾಗಿರುವ ಆಸ್ಪತ್ರೆಯಲ್ಲಿ ಇದೀಗ ಮೂವರು ಮಹಿಳೆಯರು ಸೇರಿದಂತೆ 7 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಕುಟುಂಬದ ಐವರು ಸದಸ್ಯರ ಕಾರು ಚಾಲಕ ಮುಂಬೈಗೆ ಹೋಗಿ ಬಂದಿದ್ದು ಅಲ್ಲಿಂದ ಸೋಂಕು ಬಂದಿರಬಹುದು ಎಂದು ಹೇಳಲಾಗುತ್ತಿದೆ. ಈ ಐದು ಮಂದಿಯಲ್ಲಿ ಒಂದು ವರ್ಷದ ಮಗು ಕೂಡ ಸೇರಿದೆ. 7ನೇ ವ್ಯಕ್ತಿ ಟ್ರಕ್ ಚಾಲಕನಾಗಿದ್ದು ಈತ ಗುಜರಾತ್ ನಿಂದ ಸಾಮಾನು ತಂದಿದ್ದ. ಅಲ್ಲಿಂದ ಸೋಂಕು ಒಕ್ಕರಿಸಿರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
     ಗ್ರೀನ್ ವಲಯ ಎಂದು ಘೋಷಿಸಿದ್ದರಿಂದ ಗೋವಾ ರಾಜ್ಯದಲ್ಲಿ ಈ ತಿಂಗಳ ಆರಂಭದಿಂದ ಬಹುತೇಕ ಚಟುವಟಿಕೆಗಳು ಆರಂಭವಾಗಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries