HEALTH TIPS

ಕೊರೋನಾ ವಿರುದ್ಧ ಹೋರಾಟದಲ್ಲಿ ಭಾರತದ ಪಾತ್ರ ಮಹತ್ವದ್ದು: ಬಿಲ್ ಗೇಟ್ಸ್

   
           ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬಿಲ್ ಗೇಟ್ಸ್ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್ ಸಂವಾದ ನಡೆಸಿದರು.
  ಕೋವಿಡ್-19ಗೆ ಸಂಬಂಧಪಟ್ಟಂತೆ ಜಾಗತಿಕ ಮಟ್ಟದ ಪ್ರಕ್ರಿಯೆ, ಕೆಲಸಗಳು, ಸೋಂಕನ್ನು ತಡೆಗಟ್ಟಲು ವೈಜ್ಞಾನಿಕ ಸಂಶೋಧನೆ, ಅಭಿವೃದ್ಧಿಯ ಅವಶ್ಯಕತೆ ಬಗ್ಗೆ ಇಬ್ಬರು ಗಣ್ಯರು ಮಾತುಕತೆ ನಡೆಸಿದರು.
             ಈ ಸಂದರ್ಭದಲ್ಲಿ ಮಾತನಾಡಿದ ಬಿಲ್ ಗೇಟ್ಸ್, ಸಂವಾದಕ್ಕೆ ಧನ್ಯವಾದಗಳು ಪಿಎಂ ನರೇಂದ್ರ ಮೋದಿ. ಕೊರೋನಾ ವೈರಸ್ ವಿರುದ್ಧ ಹೋರಾಡಲು ಜಾಗತಿಕ ಮಟ್ಟದಲ್ಲಿ ದೇಶಗಳ ಮಧ್ಯೆ ಸಹಕಾರ ಅತ್ಯಗತ್ಯ. ಕೋವಿಡ್-19ನಿಂದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಕಡಿಮೆ ಮಾಡಲು ಭಾರತದ ಪಾತ್ರ ಇಲ್ಲಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಲಸಿಕೆ, ಪರೀಕ್ಷೆ, ಚಿಕಿತ್ಸೆಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು ಎಂದರು. ಇದಕ್ಕೆ ದನಿಗೂಡಿಸಿದ ಪಿಎಂ ಮೋದಿ, ಜಾಗತಿಕ ಮಟ್ಟದ ಪ್ರಯತ್ನಕ್ಕೆ ಭಾರತ ಮನಃಪೂರ್ವಕವಾಗಿ ತನ್ನ ಸಾಮಥ್ರ್ಯವನ್ನು ಧಾರೆಯೆರೆಯಲು ಮುಂದಾಗಿದ್ದು ಕೊರೋನಾ ವಿರುದ್ಧ ಹೋರಾಟದಲ್ಲಿ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂದು ಜಾಗತಿಕ ಮಟ್ಟದಲ್ಲಿ ದೇಶಗಳ ಜೊತೆ ಚರ್ಚೆ ನಡೆಸಲು ಸಿದ್ಧವಿದೆ ಎಂದರು.
       ಆರೋಗ್ಯ ಬಿಕ್ಕಟ್ಟಿನ ವಿರುದ್ಧದ ಹೋರಾಟದಲ್ಲಿ ಭಾರತ ಕೈಗೊಂಡ ಪ್ರಜ್ಞಾಪೂರ್ವಕ ವಿಧಾನವನ್ನು ಮೋದಿ ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries