ಕುಂಬಳೆ: ಕುಂಬಳೆ ಶಾಲೆ ರಸ್ತೆಯಲ್ಲಿ ವಾಸಿಸುತ್ತಿರುವ ಗೋಪಾಲಕೃಷ್ಣ ನಾಯಕ್ (ಗೋಪಾಲ ಮಾಮ )(94) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ತಮ್ಮ ಸ್ವಗ್ರಹದಲ್ಲಿ ನಿಧನರಾದರು.
ಕುಂಬಳೆ ಪೇಟೆಯ ಹಿರಿಯ ವ್ಯಾಪಾರಿಯು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರು, ಕುಂಬಳೆಯಲ್ಲಿ ಪ್ರಥಮವಾಗಿ ರಾ.ಸ್ವ.ಸೇ.ಸಂಘದ ನಿತ್ಯ ಶಾಖೆ ಪ್ರಾರಂಭಿಸುವಲ್ಲಿ ಮಂಚೂಣಿಯಲ್ಲಿ ಇದ್ದ ಇವರು ಕುಂಬಳೆ ಜಿ.ಯಸ್.ಬಿ ಸಮಾಜದ ಹಿರಿಯರು, ಶ್ರೀ ವೀರ ವಿಠ್ಠಲ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾಗಿದ್ದರು. ಮೃತರು 7 ಮಂದಿ ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


