ಕಾಸರಗೋಡು: ಕೋವಿಡ್ ಮುಕ್ತ ಜಿಲ್ಲೆಯಾದ ಕಾಸರಗೋಡಿನ ಯಶೋಗಾಥೆ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ಫೆ.3ರಂದು ಮೊದಲ ಕೊರೋನಾ ಕೇಸ್ ಜಿಲ್ಲೆಯಲ್ಲಿ ವರದಿಯಾಗಿತ್ತು. ಅಂದಿನಿಂದ 178 ಕೊರೋನಾ ಕೇಸ್ ವರೆಗೆ ಬೆಳೆದು ನಿಂತಾಗ ಜಿಲ್ಲೆಯ ಎಲ್ಲೆಡೆ ಹಾಹಾಕಾರ ಕಂಡುಬಂದಿತ್ತು. ಮೊದಲ ಹಂತದಲ್ಲಿ ಒಬ್ಬ ರೋಗಿ ಮಾತ್ರ ಜಿಲ್ಲೆಯಲ್ಲಿದ್ದರೆ, ಎರಡನೇ ಹಂತಕ್ಕೆ ತಲಪಿದಾಗ 177 ಮಂದಿಯಾಗಿ ಸಂಖ್ಯೆ ಬೆಳೆದಿತ್ತು.
ಒಟ್ಟು ರೋಗಿಗಳಲ್ಲಿ 108 ಮಂದಿಯೂ ವಿದೇಶಗಳಿಂದ ಬಂದವರು. ಚೆಮ್ನಾಡ್ ಗ್ರಾಮಪಂಚಾಯತ್ ನಲ್ಲಿ ಅತ್ಯಧಿಕ ಪ್ರಮಾಣದ ರೋಗಿಗಳಿದ್ದರು. ಇಲಲಿ ಒಟ್ಟು 39 ಮಂದಿಗೆ ಸೋಂಕು ಖಚಿತಗೊಂಡಿತ್ತು. ಕಾಸರಗೋಡು ನಗರಸಭೆಯಲ್ಲಿ 34 ಮಂದಿ, ಚೆಂಗಳ ಗ್ರಾಮಪಂಚಾಯತ್ ನಲ್ಲಿ 25, ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ನಲ್ಲಿ 15 ಮಂದಿ, ಉದುಮಾದಲ್ಲಿ 14 ಮಂದಿ, ಮಧೂರು ಗ್ರಾಮಪಂಚಾಯತ್ ನಲ್ಲಿ 13, ಮುಳಿಯಾರು ಗ್ರಾಮಪಂಚಾಯತ್ ನಲ್ಲಿ 8, ಕಾಞಂಗಾಡ್ ನಗರಸಭೆಯಲ್ಲಿ 7, ಪಳ್ಳಿಕ್ಕರೆ 6, ಕುಂಬಳೆ ಮತ್ತು ಅಜಾನೂರಿನಲ್ಲಿ ತಲಾ 4, ಪಳ್ಳಿಕ್ಕರೆ ಗ್ರಾಮಪಂಚಾಯತ್ ನಲ್ಲಿ 6, ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ನಲ್ಲಿ 2, ಬದಿಯಡ್ಕ ಗ್ರಾಮಪಂಚಾಯತ್ ನಲ್ಲಿ 3, ಪೈವಳಿಕೆ, ಮಂಗಲ್ಪಾಡಿ, ಮೀಂಜಗಳಲ್ಲಿ ತಲಾ ಒಬ್ಬ ರೋಗಿ ಇದ್ದರು.


