ಕಾಸರಗೋಡು: ಕೊರೋನಾ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಜಿಲ್ಲೆ ಎಲ್ಲ ಪಡಿತರ ಅಂಗಡಿಗಳಲ್ಲಿ ಹ್ಯಾಂಡ್ ಸ್ಯಾನಿ ಟೈಸರ್ ಮತ್ತು ಸಾಬೂನು ಇರಿಸಲಾಗಿದೆ ಎಂಬುದನ್ನು ಖಚಿತಪಡಿಸಲಾಗಿದೆ ಎಂದು ಜಿಲ್ಲಾ ಸಪ್ಲೈ ಆಫೀಸರ್ ವಿ.ಕೆ.ಶಶಿಧರನ್ ತಿಳಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಧಾನ್ಯಗಳ ವಿತರಣೆ ನಡೆಸುವಮುನ್ನ ಸ್ಯಾನಿಟೈಸರ್ ಬಳಸಿ ಕೈ ಶುಚಿಗೊಳಿಸಬೇಕು. ಫಲಾನುಭವಿಗಳು ಈ ಬಗ್ಗೆ ಪಡಿತರ ಅಂಗಡಿ ಮಾಲೀಕರಲ್ಲಿ ಆಗ್ರಹಿಸಬಹುದು.


