ಕಾಸರಗೋಡು: ಮುಖ್ಯಮಂತ್ರಿ ಅವರ ದುರಂತ ನಿವಾರಣೆ ನಿಧಿಗೆ 10025 ರೂ. ದೇಣಿಗೆ ನೀಡುವ ಮೂಲಕ ಕನ್ನಡ ಸಿನಿಮಾ ಬಾಲನಟ ಮಾದರಿಯಾಗಿದ್ದಾರೆ. ಕಾಸರಗೋಡು ವಿದ್ಯಾನಗರ ಬಳಿಯ ಪುದುಮಣ್ಣು ನಿವಾಸಿ ಎಂ.ಎಸ್.ಸಾಯಿಕೃಷ್ಣ ಈ ರೀತಿ ಉದಾರತೆ ಮೆರೆದಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಿಧಿಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದ್ದಾರೆ. ವೈದಿಕ ಸಮಾರಂಭಗಳ ಭೋಜನ ವೇಳೆ ಲಭಿಸುವ ದಕ್ಷಿಣೆಯನ್ನು ಸಂಗ್ರಹಿಸಿದ ಮೂಲಕ ಈ ನಿಧಿ ರೂಪುಗೊಂಡಿದೆ ಎಂದು ಇವರು ತಿಳಿಸಿದರು. 7 ನೇ ತರಗತಿ ವಿದ್ಯಾರ್ಥಿಯಾಗಿರುವ ಸಾಯಿಕೃಷ್ಣ ಅವರು ಬಹುಮುಖ ಪ್ರತಿಭೆಯಾಗಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಕೃಷ್ಣ ಕುಮಾರ್-ಶಿಕ್ಷಕಿ ಸ್ವಪ್ನಾ ದಂಪತಿ ಪುತ್ರ.

