ನವದೆಹಲಿ: ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ 20 ಲಕ್ಷ ಕೋಟಿ ರೂ.ಆರ್ಥಿಕ ಪ್ಯಾಕೇಜ್ ನ್ನು ಆತ್ಮ-ನಿರ್ಭರ ಭಾರತ ನಿರ್ಮಾಣಕ್ಕಾಗಿ ಘೋಷಿಸಿರುವರು.
ಪ್ರಧಾನಿ ಮೋದಿ ಭಾಷಣದ ನಂತರ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆತ್ಮ-ನಿರ್ಭರ ಪರಿಭಾಷೆ ಅರ್ಥವನ್ನು ಗೂಗಲ್ ಮೂಲಕ ಹುಡುಕ ತೊಡಗಿದರು. ನಿನ್ನೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಆತ್ಮ ನಿರ್ಭರ ಪದದ ಅರ್ಥವನ್ನು ಹೇಳುವ ಪ್ರಯತ್ನ ಮಾಡಿದರು.
ಈಗ ದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಈ ಆತ್ಮ ನಿರ್ಭರ ಹುಟ್ಟಿಕೊಂಡಿದ್ದು ಹೇಗೆ ? ಎನ್ನುವ ವಿಚಾರವನ್ನು ನಾವು ಐತಿಹಾಸಿಕ ಹಿನ್ನಲೆಯ ಮೂಲಕ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಆತ್ಮ ನಿರ್ಭರವನ್ನು ಇಂಗ್ಲಿಷ್ ನಲ್ಲಿ Selp-reliant ಎಂದು ಕರೆಯಲಾಗುತ್ತದೆ.ಇದಕ್ಕೆ ಕನ್ನಡದಲ್ಲಿ 'ಸ್ವಾವಲಂಬನೆ' ಎಂದು ಕರೆಯುತ್ತಾರೆ.
ಆತ್ಮ ನಿರ್ಭರ ಪರಿಭಾಷೆಯ ಹಿನ್ನಲೆ:
ಬ್ರಿಟಿಷರ ವಸಾಹತುಶಾಹಿ ಆಡಳಿತದಲ್ಲಿದ್ದಂತಹ ಭಾರತವು ಸ್ವಾತಂತ್ರದ ನಂತರ ಸಂಪನ್ಮೂಲವನ್ನು ಕ್ರೂಡಿಕರಿಸುವುದು ಅತ್ಯಂತ ಅವಶ್ಯಕವಾಗಿತ್ತು ,ಈ ಹಿನ್ನಲೆಯಲ್ಲಿ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಸ್ವಾವಲಂಬನೆಗೆ ಹೆಚ್ಚಿನ ಆಧ್ಯತೆಯನ್ನು ನೀಡಿದರು.ಈ ಹಿನ್ನಲೆಯಲ್ಲಿ ದೇಶವು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪಂಚವಾರ್ಷಿಕ ಯೋಜನೆಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಗಾಂಧೀಜಿ ಕರ ಕುಶಲ ಕೈಗಾರಿಕೆಗಳಿಗೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಸ್ವದೇಶೀ ಚಳುವಳಿಗೆ ಮೊದಲ ಅಡಿಪಾಯ ಹಾಕಿದ್ದರು.
ಆತ್ಮ ನಿರ್ಭರ್ ಅಂದರೆ ಸ್ವಾವಲಂಬಿಯಾಗಿರೋದು.. ಅಂದರೆ ನಮ್ಮ ಮೇಲೆ ನಾವು ನಂಬಿಕೆ ಇಟ್ಟು ಮುಂದೆ ಸಾಗೋದು.
ನಮಗೆ ಸಹಾಯ ಮಾಡಲು ಅವರು ಬರ್ತಾರೆ, ಇವರು ಬರ್ತಾರೆ ಅಂತ ಕಾಯೋ ಬದಲು ನಮ್ಮ ಜೀವನದ ದಾರಿಯನ್ನು ನಾವೇ ಕಂಡು ಹಿಡಿಯೋದು.
ನಮ್ಮ ರಕ್ಷಣೆ ನಾವೇ ಮಾಡ್ಕೊಳ್ಳೋದು.
ನಮ್ಮ ಪ್ರಾಣ ನಮ್ಮ ಕೈಯಲ್ಲಿ.
ನಾವು ಮಾಡುವ ಕರ್ಮದ ಫಲ ನಮಗೆ.
ಜವಾಬ್ದಾರಿಯಿಂದ ವರ್ತಿಸಿದರೆ ಜೀವನ.
ಬೇಜವಾಬ್ದಾರಿ ಮಾಡಿದರೆ ಮರಣ.
ಸ್ವಾವಲಂಬೀ ಶ್ರೇಷ್ಠ ಜೀವನ.
ಗೀತೆಯಲ್ಲಿ ಕೃಷ್ಣ ಹೇಳೋದೂ ಇದನ್ನೇ..
ಉದ್ದರೇದಾತ್ಮಾನಾಂ ಆತ್ಮಾನಾಮವ್ಯಯಸಾದಯೇತ್.
ನಿನ್ನನ್ನು ನೀನು ಉದ್ದರಿಸಿಕೊಳ್ಳಬೇಕು.
ಬೇರೊಬ್ಬರು ಬಂದು ನಿನ್ನನ್ನು ಉದ್ಧರಿಸುತ್ತಾರೆಂದು ಕಾಯಬೇಡ.
ಧನಬಲಕ್ಕಿಂತ ಆತ್ಮಬಲ ದೊಡ್ಡದು..
ಧನಬಲದಿಂದ ಬೀಗುತ್ತಿದ್ದ ಅಮೇರಿಕಾ ಮಕಾಡೆ ಮಲಗಿದೆ.
ಆತ್ಮಬಲವಿರುವ ಭಾರತೀಯರು ಕೊರೊನಾ ಎಂಬ ಮಹಾವಿಪತ್ತನ್ನು ಎದುರಿಸಿ ಹಿಮ್ಮೆಟ್ಟಿಸುತ್ತಿದ್ದಾರೆ.
ಯುದ್ಧ ಇನ್ನೂ ಮುಗಿದಿಲ್ಲ.
ಯುದ್ದದಲ್ಲಿ ಎಷ್ಟು ಮಂದಿ ಜೀವ ಕಳೆದುಕೊಂಡರು ಅನ್ನೋದಕಿಂತ ವಿಜಯ ಯಾರದು ಅನ್ನುವುದು ಮುಖ್ಯವಾಗುತ್ತದೆ.


