ತಿರುವನಂತಪುರ: 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಮತ್ತು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಸ್ವಾವಲಂಬಿ ಭಾರತ ಮಿಷನ್ ನಲ್ಲಿ ಹೊಸತೇನೂ ಇಲ್ಲ, ಜಾರಿಯಲ್ಲಿದ್ದ "ಮೇಕ್ ಇನ್ ಇಂಡಿಯಾ" ಉಪಕ್ರಮವನ್ನೇ ಮತ್ತೊಮ್ಮೆ ಮೋದಿ ಉಚ್ಚರಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ತಿರುವನಂತಪುರಂ ಸಸದರಾದ ಶಶಿ ತರೂರ್ ಹೇಳಿದ್ದಾರೆ.
ಟ್ವಿಟ್ತರ್ ನಲ್ಲಿ ತರೂರ್ ಪ್ರಧಾನಿಗಳ ಬಾಷಣದ ಬಗ್ಗೆ ಪ್ರತಿಕ್ರಯಿಸಿದ್ದು "ಮೋದಿ ಹಳೆಯ ಜೋಡಿ ಸಿಂಹಗಳನ್ನೇ ಹೊಸ ಹೆಸರಿನಲ್ಲಿ ಮಾರಾಟ ನಡೆಸಿದ್ದಾರೆ. ಇದರೊಡನೆ ಮತ್ತಷ್ಟು ಕನಸುಗಳನ್ನು ಸಹ ರಾಶಿ ಹಾಕಲಾಗಿದೆ"" ಎಂದಿದ್ದಾರೆ.
ದೇಶವು "ಸ್ವಾವಲಂಬಿಯಾಗಲು" ಮತ್ತು ಕೋವಿಡ್ -19 ಬಿಕ್ಕಟ್ಟನ್ನು ಎದುರಿಸಲು 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಪ್ರಧಾನಿ ಮಂಗಳವಾರ ಪ್ರಕಟಿಸಿದ್ದರು.
ನಾಲ್ಕನೇ ಹಂತದ ಲಾಕ್ ಡೌನ್ ಅನ್ನು ಹೊಸ ನಿಯಮಗಳೊಂದಿಗೆ ಸಂಪೂರ್ಣವಾಗಿ ಮರುವಿನ್ಯಾಸದೊಡನೆ ಜಾರಿಗೆ ತರಲಾಗುತ್ತದೆಮೇ 18ರ ಒಳಗೆ ಇದರ ರೂಪುರೇಷೆಗಳನ್ನು ತಿಳಿಸಲಾಗುತ್ತದೆ ಎಂದು ಪ್ರಧಾನಿ ಘೋಷಿಸಿದ್ದರು.
नए नाम से वही पुराना शेर बेच गए
सपनों के वो फिर से ढ़ेरों ढ़ेर बेच गए...#MakeInIndia is now आत्मनिर्भर भारत, कुछ और भी नया था क्या?
5,982 people are talking about this



