HEALTH TIPS

ಗಿಲ್ಗಿಟ್-ಬಾಲ್ಟಿಸ್ತಾನ್ ನಕಲಿ ಟ್ವೀಟರ್ ಖಾತೆ: ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ


          ನವದೆಹಲಿ: ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್ ಕುರಿತು ನಕಲಿ ಟ್ವೀಟರ್ ಗಳ ಬಗ್ಗೆ ಜನರು ಎಚ್ಚರವಾಗಿರಬೇಕೆಂದು ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ಸಲಹೆ ನೀಡಿದೆ.
     ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಲಡಾಖ್ ಕುರಿತು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿನಿಮಯವಾಗಿರುವ ಮಾಹಿತಿ ಅಧಿಕೃತವಲ್ಲ ಎಂದು ಗೃಹ ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ಗಿಲ್ಗಿಟ್-ಬಾಲಿಸ್ತಾನ್ ಕುರಿತು ಇತ್ತೀಚಿಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಟ್ವಿಟರ್ ಖಾತೆಯನ್ನು ದೃಢೀಕರಿಸಲಾಗಿಲ್ಲ ಎಂದು ಗೃಹ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ. 31,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಈ ಖಾತೆ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಅಧಿಕೃತ ಟ್ವಿಟರ್ ಖಾತೆಯಲ್ಲ ಎಂದು ಟ್ವೀಟ್ ಮಾಡಿದೆ. ಕೇಂದ್ರ ಭೂ ಭಾಗ ಸೇರಿದ ಲಡಾಖ್‍ನ ಅಧಿಕೃತ ಟ್ವಿಟರ್ ಖಾತೆಯಲ್ಲಿ  @DIPR_Leh ಮತ್ತು @ InformationDep4 ಎರಡು ಖಾತೆಗಳು ಮಾತ್ರ ಅಧಿಕೃತ ಎಂದು ತಿಳಿಸಿದೆ.  31 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಖಾತೆ ನಕಲಿ .. ಅದರಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿಗೆ ಮಾನ್ಯತೆ ಇಲ್ಲ ಎಂದು ಅದು ಹೇಳಿದೆ ಆದರೆ, ಕೇಂದ್ರಾಡಳಿತ ಪ್ರದೇಶ ಲಡಾಕ್‍ನ ಅಧಿಕೃತ ಮಾಹಿತಿಗಾಗಿ,@DIPR_Leh & @ InformationDep4 ಖಾತೆಗಳನ್ನು ಮಾತ್ರ ಅನುಸರಿಸಿ. ಈ ಎರಡು ಅಧಿಕೃತ ಸರ್ಕಾರಿ ಖಾತೆಗಳಾಗಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
      ಬಾಲ್ಟಿಸ್ತಾನ್, ಲಡಾಖ್ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಬಗ್ಗೆ ಅಧಿಕಾರಿಗಳು ಪ್ರಮುಖ ಮಾಹಿತಿ ಪ್ರಕಟಣೆ ಅಥವಾ ಬಿಡುಗಡೆ ಮಾಡುತ್ತಿದ್ದಾರೆ ಎಂದು ತಿಳಿಸಲಾಗಿದೆ. ಹಾಗಾಗಿ ಕೇಂದ್ರಾಡಳಿತ ಪ್ರದೇಶ ಲಡಾಕ್‍ನ ಮಾಹಿತಿ ಮತ್ತು ಪ್ರಕಟಣೆಗಳ ಬಗ್ಗೆ ದೇಶದ ಜನರು ಜಾಗೃತರಾಗಿರಬೇಕು ಎಂದು ಸಲಹೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries