ಕಾಸರಗೋಡು: ಕರ್ತವ್ಯದಲ್ಲಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಕಣ್ಣೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾನಗರ ಠಾಣೆಯ ಸಿವಿಲ್ ಪೆÇಲೀಸ್ ಅಧಿಕಾರಿ ಸನೂಪ್ ಕುಮಾರ್ ಅವರಿಗೆ ಲಯನ್ಸ್ ಕ್ಲಬ್ ಚಂದ್ರಗಿರಿ ವತಿಯಿಂದ 1,11,111 ರೂ. ಆರ್ಥಿಕ ಸಹಾಯ ವಿತರಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಲ್.ರಶೀದ್ ಅವರು ಜಿಲ್ಲಾ ಪೆÇಲೀಸ್ವರಿಷ್ಠಾಧಿಕಾರಿ ಪಿ.ಎಸ್.ಸಾಬು ಅವರಿಗೆ ಸಹಾಯ ಹಸ್ತಾಂತರಿಸಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ಐ.ಪಿ.ಪಿ.ಜಲೀಲ್ ಮಹಮ್ಮದ್, ಒ.ಕೆ.ಮಹಮ್ಮದ್, ಎಂ.ಎಂ.ನೌಷಾದ್, ಡಿ.ವೈ.ಎಸ್.ಪಿ.ಬಾಲಕೃಷ್ಣನ್ ನಾಯರ್, ವಿದ್ಯಾನಗರ ಸಿ.ಐ.ಮನೋಜ್ ಮೊದಲಾದವರು ಉಪಸ್ಥಿತರಿದ್ದರು.
ಕೋವಿಡ್ ಪ್ರತಿರೋಧ ಸಂಬಂಧ ಕರ್ತವ್ಯದಲ್ಲಿದ್ದ ಸನೂಪ್ ಕುಮಾರ್ ಅವರಿಗೆ ಅತಿ ವೇಗದಲ್ಲಿ ಬಂದ ಬೈಕೊಂದು ಡಿಕ್ಕಿಯಾದ ಪರಿಣಾಮ ತಲೆಗೆ ಮತ್ತು ಬೆನ್ನೆಲುಬಿಗೆ ಗಂಭೀರ ಗಾಯಗಳಾಗಿವೆ.


