HEALTH TIPS

ದಾದಿಯರ ದಿನಾಚರಣೆ: ಕಾಸರಗೋಡು ಜಿಲ್ಲೆಯ ದಾದಿಯರ ಸೇವೆ ಸ್ತುತ್ಯರ್ಹ

   
        ಕಾಸರಗೋಡು:  ಜಗತ್ತು ದಾದಿಯರ ದಿನ ಆಚರಿಸುವ ವೇಳೆ ಕಾಸರಗೋಡು ಜಿಲ್ಲೆಯಲ್ಲಿ ನಡೆಯುತ್ತಿರುವ ಕೊರೋನಾ ಪ್ರತಿರೋಧ ಹೋರಾಟದ ಮುಂಚೂಣಿಯ ಯೋಧರಲ್ಲಿ "ಶಾಲಾ ಆರೋಗ್ಯ ದಾದಿಯರು" ಎಂದು ಕರೆಸಿಕೊಳ್ಳುವ ಆರ್.ಬಿ.ಎಸ್.ಕೆ. ನರ್ಸ್ ಗಳ ಸೇವೆ ಅನನ್ಯವಾಗಿ ಸಲ್ಲುತ್ತಿರುವುದು ಗಮನಾರ್ಹ. 
        ಹೆರಿಗೆ ವಿಭಾಗ ಸಹಿತ ಅನಿವಾರ್ಯ ವಾರ್ಡ್ ಗಳಿಂದ ತೊಡಗಿ ತುರ್ತು ವಿಭಾಗಗಳ ವರೆಗೆ ಸಕ್ರಿಯರಾಗಿದ್ದ ದಾದಿಯರು ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಲ್ಲೂ ತಮ್ಮ ಯೋಗದಾನ ನೀಡುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಆರೋಗ್ಯ ಇಲಾಖೆಗಳ ನೇತೃತ್ವದಲ್ಲಿ ಇವರು ದುಡಿಯುತ್ತಿದ್ದಾರೆ. ಕೋವಿಡ್ 19 ಕ್ಷಿಪ್ರ ಪಡೆಯಲ್ಲಿ ಪೆÇಲೀಸ್ ಇಲಾಖೆ, ಜೆ.ಎಚ್.ಎ., ಆರ್.ಬಿ.ಎಸ್.ಕೆ. ದಾದಿಯರು ಮುಂಚೂಣಿಯಲ್ಲಿರುವವರು. ಈ ಪಡೆ ಕೋವಿಡ್ ವರದಿಯಾದ ಮೊದಲ ದಿನಗಳಲ್ಲೇ ರೈಲು ನಿಲ್ದಾಣ ಸಹಿತ ಸಾರ್ವಜನಿಕ ಪ್ರದೇಶಗಳಲ್ಲಿ ಸತತ 24 ತಾಸುಗಳಲ್ಲೂ ಜನತೆಯ ಮಾಹಿತಿ ಸಂಗ್ರಹ ಸಹಿತ ಕಾಯಕಗಳಲ್ಲಿ ದೊಡ್ಡ ಕೊಡುಗೆ ನೀಡಿದ್ದರು. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಕಾಸರಗೋಡು ಜನರಲ್ ಆಸ್ಪತ್ರೆ  ಇತ್ಯಾದಿ ಕಡೆಗಳ ಹೆಲ್ಪ್ ಡೆಸ್ಕ್ ಗಳ ಪೂರ್ಣ ಹೊಣೆ ದಾದಿಯರದೇ ಆಗಿತ್ತು. ಇಲ್ಲಿ ಬೇರೆ ಬೇರೆ ವಿಧದ ಸೇವೆ ಇವರು ನಡೆಸಿದ್ದರು. ನಿಗಾದಲ್ಲಿರುವವರ ಸ್ಯಾಂಪಲ್ ಸಂಗ್ರಹ, ಸೋಂಕು ಖಚಿತಗೊಂಡವರ ರೂಟ್ ಮ್ಯಾಪ್ ತಯಾರಿ, ಸ್ಕ್ರೀನ್ ಫಾಂ, ನೋಂದಣಿ, ಕಮ್ಯೂನಿಟಿ ಫಾಂ ಸಹಿತ ವಿವಿಧ ವಿಂಗಡಣೆಗಳ ಮೂಲಕ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯ ತಲಪ್ಪಾಡಿಯಿಂದ ಪಾಣತ್ತೂರು ವರೆಗಿನ ಪ್ರಧಾನ ಚೆಕ್ ಪೆÇೀಸ್ಟ್ ಗಳಲ್ಲಿ ಪೆÇಲೀಸರು ಜೊತೆಗೆ ವಾಹನತಪಾಸಣೆ ವೇಳೆ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದರು. ಸೋಂಕು ಖಚಿತಗೊಂಡು ಆಸ್ಪತ್ರೆಗೆ ದಾಖಲಾದವರ ಶುಶ್ರೂಷೆಯಿಂದ ತೊಡಗಿ ಅವರು ಗುಣಮುಖರಾಗಿ ಬಿಡುಗಡೆ ಗೊಳ್ಳುವ ವರೆಗಿನ ಎಲ್ಲ ಹೊಣೆಗಾರಿಕೆಯನ್ನೂ ವಹಿಸಿಕೊಂಡು ಮಾನವೀಯತೆ ಮೆರೆದಿದ್ದಾರೆ. 
       ಜಿಲ್ಲಾ ಆರ್.ಬಿ.ಎಸ್. ಸಂಚಾಲಕಿ ಅನು ಅರವಿಂದನ್ ಅವರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 63 ದಾದಿಯರು ಕೋವಿಡ್ 19 ಪ್ರತಿರೋಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಜಗತ್ತು ಇಂದು ಆದಿಯರ ದಿನ ಆಚರಿಸುತ್ತಿರುವ ವೇಳೆ ಕಾಸರಗೋಡು ಜಿಲ್ಲೆಯ ದಾದಿಯರೂ ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ಆರೋಗ್ಯ ಕೇರಳಂ ಯೋಜನೆಯ ಜಿಲ್ಲಾ ಪೆÇ್ರೀಗ್ರಾಂ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್ ಅಭಿಪ್ರಾಯಪಟ್ಟಿದ್ದಾರೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries