ಕಾಸರಗೋಡು: ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಅನ್ಯ ರಾಜ್ಯಗಳಿಂದ ಊರಿಗೆ ವಾಪಸಾಗುವ ಕೇರಳೀಯರಿಗೆ ರಾಜ್ಯದ ಗಡಿಯಲ್ಲಿ ಕೇರಳ ಸರಕಾರ ನೀಡುತ್ತಿರುವ ಕಿರುಕುಳವನ್ನು ಪ್ರತಿಭಟಿಸಿ ಬಿಜೆಪಿ ನೇತೃತ್ವದಲ್ಲಿ ಕಾಸರಗೋಡು ಕೆ ಎಸ್ ಆರ್ ಟಿ ಸಿ ಡಿಪೆÇೀ ಪರಿಸರದಲ್ಲಿ ಧರಣಿ ನಡೆಯಿತು.
ಅನ್ಯ ರಾಜ್ಯಗಳಿಂದ ಕೇರಳಕ್ಕೆ ಬರುತ್ತಿರುವ ಕೇರಳೀಯರಿಗೆ ತಲಪಾಡಿ ಗಡಿಯ ಕೌಂಟರ್‍ಗಳಲ್ಲಿ ನಿಬಂಧನೆಗಳೆಂದು ಹೇಳಿಕೊಂಡು ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ಗಂಟೆಗಳ ಕಾಲ ತಡೆ ಹಿಡಿದು ಕಿರುಕುಳ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕೌಂಟರ್‍ಗೆ ತಲುಪುವವರಿಗೆ ನೀರು, ಆಹಾರ ಯಾವುದನ್ನು ನೀಡದೆ ಸತಾಯಿಸಲಾಗುತ್ತಿದೆ ಎಂದು ಬಿಜೆಪಿ ದೂರಿದೆ. ಅನ್ಯರಾಜ್ಯಗಳಿಂದ ಬರುವ ಕೇರಳೀಯರಿಗೆ ಊರಿಗೆ ತಲುಪಲು ಕೇರಳ ಸರಕಾರ ವಾಹನ ಸೌಕರ್ಯ ಮಾಡದೆ ಸಮಸ್ಯೆಯನ್ನು ತಂದೊಡ್ಡುತ್ತಿದೆ. ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಅವರನ್ನು ಮನೆಗೆ ತಲುಪಿಸಲು ಕ್ರಮ ತೆಗೆದುಕೊಳ್ಳಬೇಕೆಂದು, ನೀರು, ಆಹಾರ ನೀಡಬೇಕೆಂದು ಆಗ್ರಹಿಸಿದೆ. ಧರಣಿಯನ್ನು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಮಾತನಾಡಿದರು.


