ಕಾಸರಗೋಡು: ವಿದೇಶಗಳಿಂದ ಊರಿಗೆ ಮರಳುವ ಕೇರಳೀಯರಿಗೆ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ನೊಂದಣಿ ನಡೆಸಲು ರಾಜ್ಯ ಸರಕಾರ"ಸ್ಕಿಲ್ ರೆಜಿಸ್ಟ್ರಿ" ಎಂಬ ಮೊಬೈಲ್ ಆಪ್ ಸಕ್ರಿಯವಾಗಿದೆ.
ಕೇರಳ ಅಕಾಡೆಮಿ ಫಾರ್ ಎಕ್ಸಲೆನ್ಸ್, ಉದ್ದಿಮೆ ತರಬೇತಿ ಇಲಾಖೆ, ಉದ್ಯೋಗ ವಿನಿಮಯ ಕೇಂದ್ರ, ಕುಟುಂಬಶ್ರೀ ಸಹಕಾರದೊಂದಿಗೆ ಕಳೆದ ವರ್ಷ ಆಪ್ ಚಟುವಟಿಕೆ ಆರಂಭಿಸಿತ್ತು. ಈಗ ವಿದೇಶಗಳಿಂದ ಆನಿವಾಸಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಆಪ್ ನ ಅನಿವಾರ್ಯತೆ ಹೆಚ್ಚಿದೆ.
ಆನಿವಾಸಿಗಳ ಜೊತೆಗೆ ಲಾಕ್ ಡೌನ್ ಪರಿಣಾ ನಿರುದ್ಯೋಗಿಗಳಾದವರಿಗೂ ಈ ಸೇವೆ ಪ್ರಯೋಜನಕಾರಿಯಾಗಲಿದೆ. ಬಡಗಿಗಳು, ಪ್ಲಂಬರ್ ಗಳು, ಅಡುಗೆ ಪರಿಣತರು, ಇಲೆ ಕ್ಟ್ರೀಶಿಯನ್ ಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ಬ್ಯೂ ಟೀಷಿಯನ್ ಇತ್ಯಾದಿ ಮಂದಿ ಈ ಮೂಲಕ ಉದ್ಯೋಗಾವಕಾಶ ಪಡೆಯಬಹುದು. ಅರ್ಹತೆ, ಪರಿಣತಿ ಮತ್ತು ಕೂಲಿ ಇತ್ಯಾದಿ ಪರಿಶೀಲಿಸಿ ತಮಗೆ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು.
ಪಾರ್ಟ್ ಟೈಂ ಉದ್ಯೋಗ ಬಯಸುವವರಿಗೂ ಇಲ್ಲಿ ಅವಕಾಶಗಳಿವೆ. ಒಂದೋ, ಎರಡೋ ತಾಸು ದುಡಿಯುವ ಕಾರ್ಮಿ ಕರ ಅಗತ್ಯವಿದ್ದವರು ಈ ಆಪ್ ಬಳಸಬಹುದಾಗಿದೆ. ಫಲಾನುಭವಿಗಳ ತೃಪ್ತಿಗನುಸಾರ ಕಾರ್ಮಿಕರಿಗೆ ಸ್ಟಾರ್ ರೇಟಿಂಗ್ ನೀಡಲಾಗುವುದು.
ಮೊದಲ ವಿಭಾಗದಲ್ಲಿ ಗೃಹೋಪಕರಣಗಳ ದುರಸ್ತಿ ನಡೆಸುವವರನ್ನು ಅಳವಡಿಸಲಾಗುವುದು. ವಾಹನ ಚಾಲಕರು, ಮನೆ ಕೆಲಸಗಾರರು, ಶುಚೀಕರಣ ಕಾರ್ಮಿಕರು, ತೆಂಗಿನಮರವೇರಿ ಕಾಯಿ ಕೊಯ್ಯುವವರು, ಬಟ್ಟೆ ಒಗೆದು, ಇಸ್ತ್ರಿ ನಡೆಸುವವರು, ಹೋಂ ನರ್ಸ್ ಗಳು, ಮನೆಗಳಲ್ಲಿ, ಆಸ್ಪತ್ರೆಗಳಲ್ಲಿ ವಯೋವೃದ್ಧರ ಪರಿಚರಣೆ ನಡೆಸುವವರು, ಮನೆಗಳಲ್ಲಿ ಮಕ್ಕಳ ಪರಿಚರಣೆ ನಡೆಸುವವರು, ಮನೆಗಳಿಗೆ ತೆರಳಿ ಸಿಹಿಮೂತ್ರ ರೋಗ, ರಕ್ತದೊತ್ತಡ ಇತ್ಯಾದಿ ತಪಾಸಣೆ ನಡೆಸುವವರು, ಮೊಬೈಲ್ ಬ್ಯೂಟಿ ಪಾರ್ಲರ್ ನಡೆಸುವವರು ಮೊದಲಾದವರನ್ನು ಈ ಸರ್ವೀಸ್ ನಲ್ಲಿ ಅಳವಡಿಸಲಾಗುವುದು.
ಗೂಗಲ್ ಪ್ಲೇ ಸ್ಟೋರ್ ನಿಂದ ಉಚಿತವಾಗಿ ಆಪ್ ಡೌನ್ ಲೋಡ್ ನಡೆಸಿ , ಅಗತ್ಯದ ಮಾಹಿತಿಗಳನ್ನು ನೀಡಿಕಾರ್ಮಿಕರಾಗಿ ಯಾ ಉದ್ಯೋಗದಾತರಾಗಿ ನೋಂದಣಿ ನಡೆಸಬಹುದು. ಕಾರ್ಮಿಕರನ್ನು ಬಯಸುವುದಿದ್ದಲ್ಲಿ ಕೊಂಚ ಮಾಹಿತಿ ನಿಡಿ ನೋಂದಣಿ ನಡೆಸಬಹುದು. ಕಾರ್ಮಿಕರಾಗಿ ದುಡಿಯಕು ಬಯಸುವವರು ತಿಳಿದಿರುವ ನೌಕರಿ, ಬಯಸುವ ಕೂಲಿ, ಗುರುತು ಚೀಟಿ ಸಹಿತ ದಾಖಲೆಗಳನ್ನು ಕಡ್ಡಾಯವಾಗಿ ಅಪ್ ಲೋಡ್ ನಡೆಸಬೇಕು. ತರಬೇತಿ ಪಡೆದಿರುವವರು ಕೋರ್ಸ್ ನ ಸರ್ಟಿ ಫಿಕೆಟ್, ತರಬೇತಿ ಪಡೆಯದೇ ಇದ್ದರೂ ಪರಿಣತಿ ಹೊಂದಿರುವವರು ಆಯಾ ವಾರ್ಡ್ ಸದಸ್ಯರ ದೃಡೀಕರಣ ಪತ್ರ ಸಲ್ಲಿಸಬೇಕು.
ಹೆಚ್ಚುವರಿ ಮಾಹಿತಿಗಾಗಿ ಸರಕಾರಿ ಐ.ಟಿ.ಐ.ಯಾ ಉದ್ಯೋಗ ವಿನಿಮಯ ಕೇಂದ್ರಗಳನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು: 04994255582( ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ), 04672209068( ಕಾಞಂಗಾಡ್ ಟೌನ್ ಉದ್ಯೋಗ ವಿನಿಮಯ ಕೇಂದ್ರ) ಸಂಪರ್ಕಿಸಬಹುದು.




