ಕಾಸರಗೋಡು: ಕರ್ನಾಟಕದ ಕೋವಿಡ್ ಸೋಂಕು ವ್ಯಾಪಕವಾಗಿರುವ ಹಾಟ್ ಸ್ಪಾಟ್ ಮತ್ತು ಇತರ ಪ್ರದೇಶಗಳಿಂದ ಅಡ್ಡದಾರಿಗಳ ಮೂಲಕ ಜನರನ್ನು ಅಕ್ರಮವಾಗಿ ಕೇರಳಕ್ಕೆ ಕರೆತರುವ ಕೆಲವರ ಯತ್ನ ಗಮನಕ್ಕೆ ಬಂದಿದೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಆದೇಶ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಇಂಥಾ ವ್ಯಕ್ತಿಗಳ ಯಾ ಸಂಘಟನೆಗಳ ಬಗ್ಗೆ ಮಾಹಿತಿ ಲಭಿಸಿದವರು ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ತಿಳಿಸಬೇಕು. ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳು ಮತ್ತು ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಈ ಅಕ್ರಮ ತಡೆಯುವ ಯತ್ನ ನಡೆಸಬೇಕು. ಕೋವಿಡ್ ಪ್ರತಿರೋಧ ಚಟುವಟಿಕೆಗಳ ಮುಂದಿನ ಹಂತ ಆರಂಭಿಸುವ ಈ ಅವಧಿಯಲ್ಲಿ ಇಂಥಾ ಅಕ್ರಮಗಳು ಜಿಲ್ಲೆಗೆ ಭಾರೀ ಅಡ್ಡ ಪರಿಣಾಮ ಬೀರುವ ಭೀತಿಯಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.