ಮಂಜೇಶ್ವರ: ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಸೋಮವಾರ 285 ಮಂದಿ ಕೇರಳ ಪ್ರವೇಶ ನಡೆಸಿದ್ದಾರೆ. 642 ಮಂದಿಗೆ ಸೋಮವಾರ ಪಾಸ್ ಮಂಜೂರು ಮಾಡಲಾಗಿದೆ. ಈ ವರೆಗೆ 5401 ಮಂದಿ ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಕೇರಳ ಪ್ರವೇಶ ನಡೆಸಿದ್ದಾರೆ. ಈ ವರೆಗೆ 14894 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಕಾಸರಗೋಡು ಜಿಲ್ಲೆಯವರಾದ 1592 ಮಂದಿ ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಊರಿಗೆ ಮರಳಿದ್ದಾರೆ. 3454 ಮಂದಿ ಈ ನಿಟ್ಟಿನಲ್ಲಿ ಪಾಸ್ ಪಡೆದಿದ್ದಾರೆ.
ಗಡಿ ಪ್ರದೇಶಗಳಿಗೆ ವಾಹನಗಳಲ್ಲಿ ಕುಟುಂಬ ಸಮೇತ ಆಗಮಿಸುವ ಕೆಲವರಿಗೆ ಕೇರಳ ಪ್ರವೇಶಾತಿಗೆ ಪಾಸ್ ಲಭಿಸುತ್ತಿಲ್ಲ ಎಂಬ ದೂರಿಗೆ ಪರಿಹಾರ ಒದಗಿಸಲಾಗಿದೆ. ಕೋವಿಡ್ 19 ಜಾಗ್ರತಾ ವೆಬ್ ಪೆÇೀರ್ಟಲ್ ಮೂಲಕ ಪಾಸ್ ಗೆ ಅರ್ಜಿ ಪಡೆದು ಹೊಣೆಗಾರಿಕೆ ಹೊಂದಿರುವ ಹೆಚ್ಚುವರಿ ದಂಡನಾಧಿಕಾರಿ/ ಉಪ ಜಿಲ್ಲಾಧಿಕಾರಿ ತಕ್ಷಣ ಪಾಸ್ ಮಂಜೂರು ಮಾಡುವ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ.

