HEALTH TIPS

ಯಾಂತ್ರಿಕ ಸಮಸ್ಯೆ-ಬೋಟಿನಿಂದ ಮೀನುಗಾರರ ರಕ್ಷಣೆ


      ಕಾಸರಗೋಡು: ಸಮುದ್ರದಲ್ಲಿ ಯಾಂತ್ರಿಕ ಸಮಸ್ಯೆಯಿಂದ ಕಾಞಂಗಾಡು ಸಮುದ್ರದಲ್ಲಿ ಕೆಟ್ಟುಹೋದ ಬೋಟ್ ಮತ್ತು ಮೀನುಗಾರರನ್ನು ಫಿಷರೀಸ್ ರೆಸ್ಕೂ ತಂಡ ಸಂರಕ್ಷಿಸಿದೆ. ಮಡಕ್ಕರ ಹಾರ್ಬರ್‍ನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟು ಮಿನಾಪೀಸ್ ಪ್ರದೇಶದ 12 ನಾಟಿಕಲ್ ಪಶ್ಚಿಮ ಭಾಗದ ಸಮುದ್ರದಲ್ಲಿ ತೆರೆ ಅಪ್ಪಳಿಸಿದ ಪರಿಣಾಮ ಯಂತ್ರ ಕೆಟ್ಟುಹೋಗಿ ಸಮುದ್ರದಲ್ಲಿ ಬಾಕಿಯಾಗಿತ್ತು.
    ಕಾಞಂಗಾಡ್ ಫಿಷರೀಸ್ ಕಂಟ್ರೋಲ್ ರೂಂನ ಸೂಚನೆಯ ಹಿನ್ನೆಲೆಯಲ್ಲಿ ಮೀನಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪಿ.ವಿ.ಸತೀಶನ್ ಅವರ ಆದೇಶ ಪ್ರಕಾರ ಫಿಷರೀಸ್ ರೆಸ್ಕ್ಯೂ ಬೋಟ್ ಕಾರ್ಯಾಚರಣೆ ನಡೆಸಿ, ಬೋಟು ಮತ್ತು ಮೀನುಗಾರರನ್ನು ಸಂರಕ್ಷಿಸಿದೆ. ಶನಿವಾರ ಬೆಳಗಿನ ಜಾವ 4 ಗಂಟೆಗೆ ಈ ಘಟನೆ ನಡೆದಿದೆ. ಫಿಷರೀಸ್ ರೆಸ್ಕ್ಯೂ ಗಾರ್ಡ್ ಪಿ.ಮನು, ಒ.ಧನೀಷ್, ಎಂ.ಸನೀಷ್,ಚಾಲಕ ನಾರಾಯಣನ್, ಕಣ್ಣನ್ ಎಂಬವರು ಸಂರಕ್ಷಕ ತಂಡದಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries