ಕುಂಬಳೆ: ಮಂಗಳವಾರ ಬೆಳಿಗ್ಗೆ ಯಿಂದ ಕುಂಬಳೆ- ಉಪ್ಪಳ, ಮಂಗಲ್ಪಾಡಿ, ಪೈವಳಿಕೆ ವ್ಯಾಪ್ತಿಯಲ್ಲಿ ಸೆಕ್ಷನ್ 144 ನ್ನು ಜಾರಿಗೊಳಿಸಿದ್ಧು ಸಾರ್ವಜನಿಕರು ಅತೀ ಅವಶ್ಯಕ ಸಾಮಾಗ್ರಿಗಳಿಗೆ ಮಾತ್ರ ಮನೆಯಿಂದ ಹೊರಗೆ ಬಂದರೆ ಸಾಕು ಎಂದು ಕುಂಬಳೆ ಹಾಗೂ ಮಂಜೇಶ್ವರ ಪೆÇೀಲಿಸರಿಂದ ಅಧಿಕೃತ ಸೂಚನೆಗಳನ್ನು ನೀಡಿರುವರು.
ಸೋಮವಾರ ಜಿಲ್ಲೆಯಲ್ಲಿ ಮತ್ತೆ 4 ರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಬಾಧಿತರು ಕುಂಬಳೆ,ಉಪ್ಪಳ,ಪ್ಯೆವಳಿಕೆ ನಿವಾಸಿಗಳಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

