ಮಂಜೇಶ್ವರ: ಕೋವಿಡ್-19 ಎದುರಾಗಿ ಅತ್ಯಂತ ಯಶಸ್ವಿಯಾಗಿ ಸುರಕ್ಷಾ ಕ್ರಮೀಕರಣ ನಡೆಸುತ್ತಿರುವ ಕೇರಳ ಸರ್ಕಾರಕ್ಕೆ ಆರ್ಥಿಕ ಸಾಂತ್ವನ ನೀಡುವುದರ ಭಾಗವಾಗಿ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ತನ್ನ ಎರಡನೇ ಕಂತಿನ ಭಾಗವಾಗಿ 10,02,254(ಹತ್ತು ಲಕ್ಷದ ಎರಡು ಸಾವಿರದ ಇನ್ನೂರ ಐವತ್ತನಾಲ್ಕು) ರೂ. ವನ್ನು ಮುಖ್ಯಮಂತ್ರಿ ದುರಂತ ನಿವಾರಣಾ ನಿಧಿಗೆ ನೀಡಿತು.
ಈ ಸಂಬಂಧ ಸಹಾಯ ನಿಧಿಗೆ ಚೆಕ್ ನ್ನು ಮಂಗಳವಾರ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಅವರಿಗೆ ಬ್ಯಾಂಕಿನ ಅಧ್ಯಕ್ಷ ಬಿ.ವಿ ರಾಜನ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ನಿರ್ದೇಶಕ ಡಾ. ಕೆ.ಖಾದರ್, ಬಿ. ರಾಮದಾಸ, ಕಾರ್ಯದರ್ಶಿ ರಾಜನ್.ಪಿ. ನಾಯರ್, ಸಿಬ್ಬಂದಿಗಳಾದ ಸೀನಿಯರ್ ಅಕೌಟೆಂಟ್ ಕೆ. ಕೃಷ್ಣಪ್ಪ, ಶಾಖಾ ಪ್ರಬಂಧಕ ಶಿವಪ್ರಸಾದ್ ಬಲ್ಲಾಳ್, ಗೀತಾ ರಾಧಾಕೃಷ್ಣನ್, ಶ್ರೀಧರ್ ಮಾಡ, ಪುರುಷೋತ್ತಮ ಪದವು, ದಯಾಕರ ಮಾಡ, ಪ್ರದೀಶ್ ಬಡಾಜೆ, ಸಿದ್ದಿಕ್ ಉದ್ಯಾವರ, ಸುಧಾಕರ ಪಕಳ, ಶಾಂತಾರಾಮ, ವೇದಾವತಿ, ಮುರಳಿ ಮೊದಲಾದವರು ಉಪಸ್ಥಿತರಿದ್ದರು. ಈ ಹಿಂದೆ ನೀಡಲಾದ ಮೊದಲ ಕಂತಿನಲ್ಲಿ ಹತ್ತು ಲಕ್ಷ ರೂ. ಗಳನ್ನು ನೀಡಲಾಗಿದ್ದು ಒಟ್ಟು ಇಪ್ಪತ್ತು ಲಕ್ಷದ ಎರಡು ಸಾವಿರದ ಇನ್ನೂರೈವತ್ತನಾಲ್ಕು ರೂಪಾಯಿಯನ್ನು ಪಾವತಿಸಿಸಲಾಗಿದೆ. ಬ್ಯಾಂಕಿನ ಲಾಭಾಂಶ ಮೊತ್ತ ಹಾಗೂ ಸಿಬ್ಬಂದಿಗಳ ಹಾಗೂ ಆಡಳಿತ ಅಧ್ಯಕ್ಷ ಹಾಗೂ ನಿರ್ದೇಶಕರ ಒಂದು ತಿಂಗಳ ಗೌರವಧನ ಮತ್ತು ವೇತನಗಳ ಮೊತ್ತವನ್ನು ಸೇರಿಸಿ ಈ ಹಣವನ್ನು ನೀಡಲಾಗಿದೆ.


