ಕಾಸರಗೋಡು: ಪ್ರಾಣದ ಹಂಗು ತೊರೆದು ರೋಗಿಗಳ ಜೀವ ಉಳಿಸಲು ಪ್ರಯತ್ನಿಸುತ್ತಿರುವ ದಾದಿಯರ ಸೇವೆ ವಿಶ್ವಕ್ಕೆ ಮಾದರಿಯಾಗಿರುವುದಾಗಿರುವುದಾಗಿ ಕಾಸರಗೋಡು ಜನರಲ್ ಆಸ್ಪತ್ರೆ ಮೇಲ್ವಿಚಾರಕ ಡಾ. ಕೆ.ಕೆ ರಾಜಾರಾಮ್ ತಿಳಿಸಿದ್ದಾರೆ. ಅವರು ಜನರಲ್ ಆಸ್ಪತ್ರೆ ಸಭಾಂಗಣದಲ್ಲಿ ಮಂಗಳವಾರ ನಡೆದ ದಾದಿಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ನರ್ಸಿಂಗ್ ಸೂಪರಿಂಟೆಂಡೆಂಟ್ ಸ್ನಿಷೀ ಕೆ.ಪಿ ಅಧ್ಯಕ್ಷತೆ ವಹಿಸಿದ್ದರು.
ಜನರಲ್ ಆಸ್ಪತ್ರೆ ಡೆಪ್ಯುಟಿ ಸೂಪರಿಂಟೆಂಡೆಂಟ್ ಡಾ. ಗೀತಾಗುರುದಾಸ್, ಡಾ. ಗಣೇಶ್(ಆರ್‍ಎಂಓ), ಜೆಪಿಎಚ್‍ಎನ್ ಪ್ರಾಂಶುಪಾಲೆ ಅಂಜು ಸಿ.ಥಾಮಸ್, ಡಾ. ಜನಾರ್ದನ ನಾಯ್ಕ್, ಮುಖ್ಯ ದಾದಿ ಮಿನಿ ಜೋಸೆಫ್ ಮುಂತಾದವರು ಉಪಸ್ಥಿತರಿದ್ದರು. ಸಂದೀಪ್ ಸ್ವಾಗತಿಸಿದರು. ದಾದಿಯರ ದಿನಾಚರಣೆ ಅಂಗವಾಗಿ ಸಿಬ್ಬಂದಿಗೆ ಹಾಗೂ ರೋಗಿಗಳಿಗೆ ಸಿಹಿತಿನಿಸಿನೊಂದಿಗೆ ಫಲಾಹಾರ ವಿತರಿಸಲಾಯಿತು.

