ಮಂಜೇಶ್ವರ: ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಇತರ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ 362 ಜನರು ಮಂಜೇಶ್ವರ ಗಡಿ ತಪಾಸಣಾ ಕೇಂದ್ರದ ಮೂಲಕ ಕೇರಳಕ್ಕೆ ಆಗಮಿಸಿದರು.
ಇದುವರೆಗೆ 4017 ಜನರು ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಕೇರಳಕ್ಕೆ ಬಂದಿದ್ದಾರೆ. ಒಟ್ಟು 9840 ಪಾಸ್‍ಗಳನ್ನು ನೀಡಲಾಗಿದೆ. ಈವರೆಗೆ 1299 ಜನರು ಕಾಸರಗೋಡು ಜಿಲ್ಲೆಗೆ ಬಂದಿದ್ದಾರೆ. ಪಾಸ್ ಕೊರತೆಯಿಂದಾಗಿ ಆಗಮಿಸಲು ಸಾಧ್ಯವಾಗದವರ ಕುರಿತು ಕಂದಾಯ ಸಚಿವ ಇ ಚಂದ್ರಶೇಖರನ್ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಸಾಕಷ್ಟು ದಾಖಲೆಗಳನ್ನು ಪರಿಶೀಲಿಸುವ ಮೂಲಕ ಜಿಲ್ಲೆಗಳಿಗೆ ಪ್ರವೇಶಿಸಲು ಮತ್ತು ಕ್ವಾರಂಟೈನ್ ಗೆ ಒಳಗಾಗಲು ಸೂಚನೆ ನೀಡಲಾಗಿದೆ.

