HEALTH TIPS

ಅನ್ಯರಾಜ್ಯದ ಅನಾರೋಗ್ಯ ಪೀಡಿತೆಯ ಉಚಿತ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಇಂದು

 
        ಕುಂಬಳೆ: ಕೋವಿಡ್‍ನ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ಅನ್ಯರಾಜ್ಯ ಕಾರ್ಮಿಕರು ಸೌಕರ್ಯಗಳ ಕೊರತೆಯಿಂದ ಸಂದಿಗ್ದತೆಗೊಳಗಾಗುತ್ತಿರುವ ಕಳವಳಕಾರಿ ವಿದ್ಯಮಾನಗಳ ಮಧ್ಯೆ ಜಿಲ್ಲೆಯ ಮಾನವೀಯತೆಗೆ ಸಾಕ್ಷಿಯಾಗಿ ಅನ್ಯರಾಜ್ಯ ಕಾರ್ಮಿಕೆಯೋರ್ವೆಗೆ ಉಚಿತ ಶಸ್ತ್ರಕ್ರಿಯೆಗೆ ಇಂದು(ಸೋಮವಾರ) ರಾಜ್ಯ ಸರ್ಕಾರ ಕಾರಣವಾಗಲಿದೆ.
        ಸಮರ್ಪಕ ದಾಖಲಾತಿಗಳ ಕೊರತೆಯ ಹೊರತಾಗಿಯೂ, ಕೇರಳವು ಮತ್ತೊಮ್ಮೆ ಯಾವುದೇ ಕಾನೂನು ಕಟ್ಟಳೆಗಳ ತಡೆ ನೀಡದೆ ಚಿಕಿತ್ಸೆಗೆ ನೆರವಾಗುವ ಮೂಲಕ ಮಾನವೀಯತೆಗೆ ಉದಾಹರಣೆಯಾಹಿ ಹೊರಹೊಮ್ಮಿದೆ. ಇದರಿಂದ ಕುಂಬಳೆಯಲ್ಲಿ ವಾಸಿಸುತ್ತಿರುವ ಕರ್ನಾಟಕ ಮೂಲದ ಮಹಿಳೆ ಮರುಹುಟ್ಟು ಪಡೆಯಲು ಸಾಧ್ಯವಾಯಿತು.
       ಕರ್ನಾಟಕ ಮೂಲದ ಸುಜಾತಾ ಮತ್ತು ಧನಪಾಲ ಇಪ್ಪತ್ತು ವರ್ಷಗಳಿಂದ ಕುಂಬಳೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಬಳಿ ಪಡಿತರ ಚೀಟಿ ಅಥವಾ ಬೇರೆ ಯಾವುದೇ ದಾಖಲೆಗಳಿಲ್ಲ. ಕರ್ನಾಟಕದ ಏಕೈಕ ಆಧಾರ್ ಕಾರ್ಡ್ ಮಾತ್ರ ಅವರಲ್ಲಿದೆ. ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಸುಜಾತಾ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿತ್ತು.
       ಬಳಿಕ ಅವರನ್ನು ಮಲಬಾರ್ ಕ್ಯಾನ್ಸರ್ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ತಜ್ಞರ ಅನುಮತಿಯಿದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಉಚಿತ ಎಂದು ಕ್ಯಾನ್ಸರ್ ಕೇಂದ್ರದ ಅಧಿಕಾರಿಗಳು ತಿಳಿಸಿದ್ದರು. ಈ ಬಗ್ಗೆ ನಿರ್ಗತಿಕರ ಸಮಸಮ್ಯೆ ಅರಿತು ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಲ್.ಪುಂಡರಿಕಾಕ್ಷ ಅವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರನ್ನು ಸಂಪರ್ಕಿಸಿ ಚಿಯಾಕ್ ಸಹಾಯ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು.
     ಜಿಲ್ಲಾಧಿಕಾರಿ ಕೂಡಲೇ ಮಧ್ಯಪ್ರವೇಶಿಸಿ ಚಿಯಾಕ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಎನ್.ಸತೀಶನ್ ಅವರನ್ನು ಸಂಪರ್ಕಿಸಿ ಕೂಡಲೇ ಕ್ರಮಕೈಗೊಳ್ಳುವಂತೆ ಕೇಳಿಕೊಂಡರು. ಸುಜಾತಾ ಶನಿವಾರ ಮಧ್ಯಾಹ್ನ ಕರ್ನಾಟಕದಲ್ಲಿರುವ ತನ್ನ ಸಹೋದರಿ ಗಂಗಾ ಅವರ ಪಡಿತರ ಚೀಟಿ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ನೀಡಿದ ಕಾರ್ಡ್ ಬಳಸಿ ತನ್ನ ಆರೋಗ್ಯ ಕಾರ್ಡ್ ಸಿದ್ಧಪಡಿಸಿದಳು. ಇಂದು ಮುಂಜಾನೆ 5 ಗಂಟೆಗೆ ಮಲಬಾರ್ ಕ್ಯಾನ್ಸರ್ ಕೇಂದ್ರಕ್ಕೆ ತೆರಳುವ ಸುಜಾತರ ಸಂಚಾರಕ್ಕೆ ಕುಂಬಳೆ ಗ್ರಾಮ ಪಂಚಾಯತ್‍ನಿಂದಲೇ ವಾಹನ ನೀಡಲಾಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries