ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ ಮೂವರಿಗೆ ಕೋವಿಡ್-19 ಪಾಸಿಟಿವ್ ಆಗಿದೆ. 6 ಮಂದಿ ರೋಗ ಮುಕ್ತರಾಗಿದ್ದಾರೆ.
ಸೋಂಕು ಪಾಸಿಟಿವ್ ಆದವರಲ್ಲಿ ಇಬ್ಬರು ಮಹಾರಾಷ್ಟ್ರದಿಂದ ಬಂದವರು, ಒಬ್ಬರು ಕುವೈತ್‍ನಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾ„ಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಕುವೈತ್‍ನಿಂದ ಆಗಮಿಸಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ 38 ವರ್ಷದ ವ್ಯಕ್ತಿ, ಮಹಾರಾಷ್ಟ್ರದಿಂದ ಬಂದಿದ್ದ ಚೆರುವತ್ತೂರು ಗ್ರಾಮ ಪಂಚಾಯತ್ ನಿವಾಸಿ 33 ವರ್ಷದ ವ್ಯಕ್ತಿ, ಪುಲ್ಲೂರು - ಪೆರಿಯ ಗ್ರಾಮ ಪಂಚಾಯತ್ ನಿವಾಸಿ 63 ವರ್ಷದ ವ್ಯಕ್ತಿ ರೋಗ ಬಾ„ತರು. ಇವರೆಲ್ಲರೂ ನಿಗಾದಲ್ಲಿದ್ದವರು.
ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 6 ಮಂದಿಗೆ ಸೋಂಕು ನೆಗೆಟಿವ್ ಆಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ್ದ ಕುಂಬಳೆ ಗ್ರಾಮ ಪಂಚಾಯತ್ ನಿವಾಸಿಗಳಾದ 56, 46, 57 ವರ್ಷದ ವ್ಯಕ್ತಿಗಳು, ಮಂಗಲ್ಪಾಡಿ ನಿವಾಸಿಗಳಾದ 33 ವರ್ಷದ ವ್ಯಕ್ತಿ, ದುಬಾಯಿಯಿಂದ ಬಂದಿದ್ದ ಮಧೂರು ಪಂಚಾಯತ್ ನಿವಾಸಿ 68 ವರ್ಷದ ವ್ಯಕ್ತಿ, 32 ವರ್ಷದ ಕೋಂಡೋಂ-ಬೇಳೂರು ಪಂಚಾಯತ್ ನಿವಾಸಿ ಗುಣಮುಖರಾದವರು.
ಕೇರಳದಲ್ಲಿ 107 ಮಂದಿಗೆ ಸೋಂಕು : ಕೇರಳದಲ್ಲಿ ರವಿವಾರ 107 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದರಲ್ಲಿ 71 ಮಂದಿ ವಿದೇಶದಿಂದ ಬಂದವರು. 28 ಮಂದಿ ಇತರ ರಾಜ್ಯಗಳಿಂದ ಬಂದಿದ್ದು, ಸಂಪರ್ಕದಿಂದ 8 ಮಂದಿಗೆ ರೋಗ ಬಾ„ಸಿದೆ. (ತೃಶ್ಶೂರು ಜಿಲ್ಲೆಯಲ್ಲಿ 3, ಮಲಪ್ಪುರಂ-2, ಪಾಲ್ಘಾಟ್-2 ಮತ್ತು ಕೊಲ್ಲಂ-1 ಎಂಬಂತೆ ಸಂಪರ್ಕದಿಂದ ರೋಗ ಬಾಧಿಸಿದೆ).
ಮಲಪ್ಪುರಂ-27, ತೃಶ್ಶೂರು-26, ಪತ್ತನಂತಿಟ್ಟ-13, ಕೊಲ್ಲಂ-9, ಆಲಪ್ಪುಳ-7, ಪಾಲ್ಘಾಟ್-6, ಕಲ್ಲಿಕೋಟೆ-6, ತಿರುವನಂತಪುರ-4, ಕೋಟ್ಟಯಂ-3, ಕಾಸರಗೋಡು-3, ಕಣ್ಣೂರು-2, ಇಡುಕ್ಕಿ-1 ಎಂಬಂತೆ ರೋಗ ಬಾ„ಸಿದೆ. ಇದೇ ಸಂದರ್ಭದಲ್ಲಿ 41 ಮಂದಿ ಗುಣಮುಖರಾಗಿದ್ದಾರೆ. ತೃಶ್ಶೂರು-14(ಇಬ್ಬರು ಪಾಲ್ಘಾಟ್ ನಿವಾಸಿಗಳು), ಕಾಸರಗೋಡು-6, ಪಾಲ್ಘಾಟ್-5, ಕಣ್ಣೂರು-5, ಕೊಲ್ಲಂ-3, ಆಲಪ್ಪುಳ-3, ತಿರುವನಂತಪುರ-1, ಪತ್ತನಂತಿಟ್ಟ-1, ಕೋಟ್ಟಯಂ-1, ಮಲಪ್ಪುರ-1, ಕಲ್ಲಿಕೋಟೆ-1(ತೃಶ್ಶೂರು ನಿವಾಸಿ) ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 1095 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 803 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ 1,91,481 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 1,89,765 ಮಂದಿ ಮನೆಗಳಲ್ಲಿ ಹಾಗು ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 1716 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಭಾನುವಾರ ಶಂಕಿತ 277 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವರೆಗೆ 83,875 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 79,957 ಸ್ಯಾಂಪಲ್ ನೆಗೆಟಿವ್ ಆಗಿದೆ.
ವೈದರ್‍ಗೆ ನೆಗೆಟಿವ್ : ಕ್ವಾರೆಂಟೈನ್‍ನಲ್ಲಿರುವಂತೆ ಸಾವಿಗೀಡಾದ ಆಯುರ್ವೇದ ವೈದ್ಯರ್, ತಳಂಗರೆ ಗಝಲಿ ನಗರದ ರಾಮಚಂದ್ರನ್ ವೈದ್ಯರ್(76) ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಆಗಿದೆ. ತಮಿಳುನಾಡಿನಿಂದ ಬಂದ ಬಳಿಕ ಆರೋಗ್ಯ ಇಲಾಖೆಯ ಅ„ಕಾರಿಗಳ ನಿರ್ದೇಶದಂತೆ ಆಸ್ಪತ್ರೆ ಕ್ವಾರೆಂಟೈನ್‍ನಲ್ಲಿದ್ದರು. ಹೀಗಿರುವಂತೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ನೆಗೆಟಿವ್ ಆಗಿರುವುದರಿಂದ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿದ್ದ ಅವರ ಮೃತ ದೇಹವನ್ನು ಸಂಬಂ„ಕರಿಗೆ ಬಿಟ್ಟುಕೊಡಲಾಯಿತು.
ಮಾಸ್ಕ್ ಧರಿಸದ 217 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 217 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 5105 ಮಂದಿ ವಿರುದ್ಧ ಈ ಪ್ರಕರಣಗಳಿಗೆ ಸಂಬಂಧಿಸಿ ಕೇಸು ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ.
ನಿಷೇಧಾಜ್ಞೆ ಉಲ್ಲಂಘನೆ : ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2583 ಕೇಸುಗಳ ದಾಖಲು : ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 2583 ಕೇಸುಗಳು ದಾಖಲಾಗಿವೆ. 3246 ಮಂದಿಯನ್ನು ಬಂಧಿಸಲಾಗಿದ್ದು, 1106 ವಾಹನಗಳನ್ನು ವಶಪಡಿಸಲಾಗಿದೆ.


